2005 ರಲ್ಲಿ ಆಸಿಡ್ ದಾಳಿಗೆ ತುತ್ತಾದ ಲಕ್ಷ್ಮೀ ಅಗರ್ವಾಲ್ ಅವರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದೀಪಿಕಾ ಪಡುಕೋಣೆ ಜೊತೆಗೆ ಚಿತ್ರವನ್ನು ಸಹ ನಿರ್ಮಿಸಲಿದ್ದಾರೆ. ಮೇಘನಾ ಗುಲ್ಜಾರ್ ನಿರ್ದೇಶನದ ರಾಝಿ ಚಿತ್ರದ ಭರ್ಜರಿ ಯಶಸ್ಸಿನ ನಂತರ, ಮೇಘನಾ ಗುಲ್ಜಾರ್ ಅವರು ಆಸಿಡ್ ದಾಳಿಗೆ ತುತ್ತಾಗಿ ಹೋರಾಟ ನಡೆಸಿದ ಲಕ್ಷ್ಮೀ ಅಗರ್ವಾಲ್ ಅವರ ಕಥೆಯನ್ನು ಆಧರಿಸಿ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ದೆಹಲಿಯ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಲಕ್ಷ್ಮಿಯ ಮೇಲೆ ದುಷ್ಕರ್ಮಿಯೊಬ್ಬ ಆಸಿಡ್ ದಾಳಿ