ಮುಂಬೈ : ಬಾಲಿವುಡ್ ಕ್ಯೂಟ್ ಕಪಲ್ ದೀಪಿಕಾ-ರಣವೀರ್ ಮದುವೆ ಬಗ್ಗೆ ಈ ಹಿಂದೆ ಬಾರೀ ರೂಮರ್ಸ್ ಕೇಳಿಬಂದಿತ್ತು. ಆದರೆ ಇದೀಗ ಸ್ವತಃ ನಟಿ ದೀಪಿಕಾ ಅವರೇ ತಮ್ಮ ಮದುವೆ ಯಾವಾಗ ಎನ್ನುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಹೌದು. ನಟಿ ದೀಪಿಕಾ ಹಾಗೂ ರಣವೀರ್ ಅವರು ಇದೇ ನವೆಂಬರ್ 14 ಹಾಗೂ 15ಕ್ಕೆ ಹಸೆಮಣೆ ಏರಲಿದ್ದಾರಂತೆ. ಈ ವಿಚಾರವನ್ನು ಖುದ್ದು ನಟಿ ದೀಪಿಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.