ಮುಂಬೈ: ವದಂತಿಗಳು ನಿಜವಾಗಿದ್ದರೆ ಈ ವರ್ಷ ನವೆಂಬರ್ನಲ್ಲಿ ಬಾಲಿವುಡ್ ಇನ್ನೊಂದು ಮದುವೆಗೆ ಸಾಕ್ಷಿಯಾಗಲಿದೆ. ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಅವರ ವಿವಾಹ ಜರುಗುವ ಎಲ್ಲಾ ಸಾಧ್ಯತೆಗಳಿವೆ. ವರದಿಗಳ ಪ್ರಕಾರ ಮದುವೆ ಹಾಗೂ ಇತರ ಕೆಲಸಗಳ ನಡುವೆ ಈ ಜೋಡಿ ಟಿವಿ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳಿವೆ.