ಸಹ ಕಲಾವಿದೆಯ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ನೆರವು ನೀಡಿದ ದೀಪಿಕಾ ಪಡುಕೋಣೆ

ಮುಂಬೈ| Krishnaveni K| Last Modified ಶುಕ್ರವಾರ, 3 ಸೆಪ್ಟಂಬರ್ 2021 (09:10 IST)
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಛಪಕ್ ಸಿನಿಮಾದ ಸಹ ಕಲಾವಿದೆಯ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ಧನಸಹಾಯ ಮಾಡಿ ಸುದ್ದಿಯಾಗಿದ್ದಾರೆ.
 > ಆಸಿಡ್ ಸಂತ್ರಸ್ತೆ ಕುರಿತಾದ ಸಿನಿಮಾ ಛಪಕ್ ನಲ್ಲಿ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾದಲ್ಲಿ ದೀಪಿಕಾ ಜೊತೆಗೆ ಆಸಿಡ್ ದಾಳಿ ಸಂತ್ರಸ್ತೆ ಬಾಲ ಪ್ರಜಾಪತಿ ಕೂಡಾ ನಟಿಸಿದ್ದರು.>   ಈಕೆಗೆ ಈಗ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಬೇಕಿದೆ. ಇದಕ್ಕೆ 16 ಲಕ್ಷ ರೂ. ವೆಚ್ಚ ತಗುಲಲಿದೆ. ಇದಕ್ಕಾಗಿ ದೀಪಿಕಾ 10 ಲಕ್ಷ ರೂ. ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ. ಇದಲ್ಲದೆ ಆನ್ ಲೈನ್ ಮೂಲಕವೂ ಹಣ ಸಂಗ್ರಹಿಸಲಾಗುತ್ತಿದೆ.ಇದರಲ್ಲಿ ಇನ್ನಷ್ಟು ಓದಿ :