ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಸದಾ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ರಣವೀರ್ ಪೋಷಕರಿಂದ ಭರ್ಜರಿ ಉಡುಗೊರೆಯನ್ನು ಪಡೆದಿರುವ ದೀಪಿಕಾ ಇದೀಗ ರಣವೀರ್ ಅವರ ಅಜ್ಜಿಯನ್ನು ಭೇಟಿ ಮಾಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಈ ಜೋಡಿ ಶೀಘ್ರದಲ್ಲೇ ಹಸೆಮಣೆ ಏರುವುದಂತೂ ಗ್ಯಾರಂಟಿ ಅನಿಸುತ್ತಿದೆ.