ಮುಂಬೈ: ಬಾಲಿವುಡ್ ನ ಮೋಸ್ಟ್ ಸೆನ್ಸೇಷನಲ್ ಜೋಡಿ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಸಂಬಂಧಕ್ಕೆ ತಿಲಾಂಜಲಿ ಇಟ್ಟು ಬಿಟ್ಟರೇ? ಕೆಲವು ಮೂಲಗಳ ಪ್ರಕಾರ ಹೌದು. ದೀಪಿಕಾ ಮತ್ತು ರಣವೀರ್ ಪರಸ್ಪರ ತಮ್ಮ ಪ್ರೀತಿ ವಿಷಯವನ್ನು ಸಾರ್ವಜನಿಕವಾಗಿ ಹೇಳಿಕೊಳ್ಳದೇ ಇದ್ದರೂ ಕಳೆದ ಐದು ವರ್ಷಗಳಿಂದ ಇಬ್ಬರೂ ಡೇಟಿಂಗ್ ನಡೆಸುತ್ತಿದ್ದುದು ಗುಟ್ಟಾಗಿ ಉಳಿದಿಲ್ಲ. ಇದೀಗ ಪದ್ಮಾವತಿ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಇವರ ನಡುವಿನ ಬಿರುಕು ಸ್ಪಷ್ಟವಾಗಿದೆ ಎನ್ನಲಾಗಿದೆ.ಪದ್ಮಾವತಿ ಸಿನಿಮಾದಲ್ಲಿ