ಮುಂಬೈ: ನಟಿ ಪ್ರಿಯಾಂಕ ಚೋಪ್ರಾ ಮದುವೆ, ಮಕ್ಕಳ ಕನಸಿನ ಬಗ್ಗೆ ಸಾಕಷ್ಟು ಬಾರಿ ಮಾತನಾಡಿದ್ದರು. ಈಗ ಮತ್ತೊಂದು ಹೇಳಿಕೆಯ ಮೂಲಕ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ‘ನಾನು ಕಳೆದ ಒಂದು ವರ್ಷದಿಂದ ಒಂಟಿಯಾಗಿದ್ದೇನೆ. ಅದಕ್ಕಿಂತ ಮೊದಲು ಕಮಿಟೆಡ್ ರಿಲೇಷನ್ಶಿಪ್ ಹೊಂದಿದ್ದೆ’ ಎಂದಿದ್ದಾರೆ ಈ ನಟಿ. ಪ್ರಿಯಾಂಕ ಬಾಯ್ಫ್ರೆಂಡ್ ಯಾರಾಗಿದ್ದಿರಬಹುದು ಎಂದು ಅಭಿಮಾನಿಗಳು ತಲೆಕೆಡಿಸಿಕೊಳ್ಳುವಂತಾಗಿದೆ ಈಗ.