ಕರೀನಾ ಮನೆಯಲ್ಲಿ ಇಲ್ಲದಿದ್ದಾಗ ತೈಮೂರ್ ಹೇಗೆ ವರ್ತಿಸುತ್ತಾನೆ ಗೊತ್ತಾ…?

ಮುಂಬೈ, ಭಾನುವಾರ, 27 ಮೇ 2018 (06:50 IST)

ಮುಂಬೈ : ತಾಯಿ ಮಗುವಿನ ಸಂಬಂಧ ಯಾರು ಬೇರ್ಪಡಿಸಲಾದ ಅನುಬಂಧ ಎನ್ನುತ್ತಾರೆ. ಹಾಗೇ ಮಗುವಿಗೆ ತಾಯಿ ತನ್ನಕಣ್ಣಿಂದ ಒಂದು ಕ್ಷಣ ದೂರವಾದರೂ ಕೂಡ ಅದು ತಳಮಳಗೊಂಡು ಅಳಲು ಶುರುಮಾಡುತ್ತದೆ. ಅದೇರೀತಿಯ ತಳಮಳ ಇದೀಗ ಬಾಲಿವುಡ್ ನಟಿ ಕರೀನಾಕಪೂರ್ ಅವರ  ಮಗ  ತೈಮೂರ್ ಗೂ ಆಗಿದೆ ಎಂದು ಕರೀನಾ ಪತಿ ಸೈಫ್ ಅಲಿ ಖಾನ್ ಅವರು ಹೇಳಿದ್ದಾರೆ.


ತಾಯಿಯಾದ ನಂತರ ನಟಿ ಕರೀನಾ ಕಪೂರ್ ಅವರು ಮತ್ತೆ ಸೈಜ್ ಜಿರೋಗೆ ಮರಳಿ ಸಿನಿಮಾದಲ್ಲಿ ನಟಿಸಲು ಶುರು ಮಾಡಿದ್ದಾರೆ. ಆದಕಾರಣ ಅವರು ಶೂಟಿಂಗ್ ಗಾಗಿ ಮಗ ತೈಮೂರ್ ನನ್ನು ಬಿಟ್ಟು ಹೋಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ತಾಯಿಯನ್ನು ಕಾಣದೆ ತೈಮೂರ್ ಯಾವ ರೀತಿ ವರ್ತಿಸುತ್ತಾನೆ ಎಂಬುದನ್ನು  ಕರೀನಾ ಪತಿ ಸೈಫ್ ಅಲಿ ಖಾನ್ ಅವರು ಹೇಳಿಕೊಂಡಿದ್ದಾರೆ.


ಇತ್ತೀಚೆಗೆ ತಮ್ಮ ವೀರ್ ದಿ ವೆಡ್ಡಿಂಗ್ ಚಿತ್ರದ ಮೊದಲು ಶೆಡ್ಯೂಲ್ ಗೆ ಕರೀನಾ ಕಪೂರ್ ತೈಮೂರ್ ನನ್ನು ತನ್ನೊಂದಿಗೆ ಕರೆದೊಯ್ಯಿದ್ದರರಂತೆ. ಈ ಸಂದರ್ಭ ಮನೆಯಲ್ಲಿ ಸೈಫ್ ಅಲಿ ಖಾನ್ ಗೆ ತುಂಬಾನೆ ಖುಷಿಯಾಗಿತ್ತು ಅಂತೆ. ಆದರೆ ಎರಡನೇ ಶೆಡ್ಯೂಲ್ ಇರುವಾಗ ಕರೀನಾ ತೈಮೂರ್ ನನ್ನು , ತಮ್ಮ ಜೊತೆಗೆ ಬಿಟ್ಟು ಹೋಗಿದ್ದರಂತೆ. ಈ ವೇಳೆ ತೈಮೂರ್ ಅಮ್ಮನಿಲ್ಲದಿದ್ದುದ್ದರಿಂದ ಕೊಂಚ ಬೇಸರಿಸಿಕೊಂಡಿದ್ದನಂತೆ. ದಿನವೀಡಿ ಒಂಥಾರ ಮೂಡಿಯಾಗಿದ್ದ. ತನ್ನ ಸುತ್ತ ಕರೀನಾ ಇಲ್ಲದ್ದು ಅವನಿಗೆ ಬೇಸರ ತರಿಸಿತ್ತು ಎಂದು ಸೈಫ್ ಅಲಿ ಖಾನ್ ಅವರು ಮಗನ ವರ್ತನೆಯ ಬಗ್ಗೆ ವಿವರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಜಾಕಿ ಶ್ರಾಫ್ ಗೆ ತಾವು ಅಷ್ಟೊಂದು ಫೇಮಸ್ ನಟ ಎಂಬುದು ತಿಳಿದದ್ದು ಬಾಲಿವುಡ್ ನ ಖ್ಯಾತ ನಟರೊಬ್ಬರ ಮಕ್ಕಳಿಂದವಂತೆ!

ಮುಂಬೈ : ಇತ್ತೀಚೆಗೆ ಬಾಲಿವುಡ್ ನಟ ಜಾಕಿ ಶ್ರಾಫ್ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಾವು ...

news

ತಮ್ಮ ವಿರುದ್ಧ ಕೇಳಿ ಬಂದ ಲೈಂಗಿಕ ಆರೋಪದ ಕುರಿತು ಕ್ಷಮೆಯಾಚಿಸಿದ ಹಾಲಿವುಡ್ ನಟ ಮಾರ್ಗನ್ ಪ್ರಿಮನ್

ಮುಂಬೈ:ಹಾಲಿವುಡ್ ಖ್ಯಾತ ಹಿರಿಯ ನಟ, ಆಸ್ಕರ್ ವಿಜೇತ ಮಾರ್ಗನ್ ಪ್ರಿಮನ್ ವಿರುದ್ಧ ಲೈಂಗಿಕ ಆರೋಪ ಕೇಳಿ ...

news

‘ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ಕನ್ನಡ ಚಿತ್ರರಂಗದವರಿಗೇಕೆ ಭೀತಿ?

ಬೆಂಗಳೂರು : ಕನ್ನಡ ಚಿತ್ರರಂಗದವರಿಗೆ ಇದೀಗ 'ಅಂಬಿ ನಿಂಗೆ ವಯಸ್ಸಾಯ್ತೋ' ಚಿತ್ರತಂಡದವರ ಆರೋಗ್ಯದ ಬಗ್ಗೆ ...

news

ನಟಿ ರಾಧಿಕಾ ಶರತ್ ಕುಮಾರ್ ಗೆ ಬ್ಲಡ್ ಕ್ಯಾನ್ಸರಾ? ಈ ಬಗ್ಗೆ ರಾಧಿಕಾರವರು ಹೇಳಿದ್ದೇನು ಗೊತ್ತಾ?

ಚೆನ್ನೈ : ತೆಲುಗು, ತಮಿಳಿನ ಖ್ಯಾತ ನಟಿ ರಾಧಿಕಾ ಶರತ್ ಕುಮಾರ್ ಅವರಿಗೆ ಬ್ಲಡ್ ಕ್ಯಾನ್ಸರ್ ಇದೆ ಎಂಬ ...