ಮುಂಬೈ : ಇತ್ತೀಚಿನ ದಿನಗಳಲ್ಲಿ ಸೆಲಿಬ್ರಿಟಿಗಳು ಟ್ರೋಲ್ ಗಳಿಗೆ ಗುರಿಯಾಗುವುದು ಸರ್ವೇ ಸಾಮಾನ್ಯ. ಸೆಲಿಬ್ರಿಟಿಗಳನ್ನು ಒಂದಲ್ಲ ಒಂದು ವಿಷಯಕ್ಕೆ ಜನರು ಟ್ರೋಲ್ ಮಾಡುತ್ತಿರುತ್ತಾರೆ. ಈ ಬಗ್ಗೆ ಕೆಲ ಸೆಲೆಬ್ರೆಟಿಗಳು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಈ ಟೀಕೆಗಳನ್ನು ಧನಾತ್ಮಕ ಅಂಶವಾಗಿ ಪರಿಗಣಿಸಿದರೆ ಆ ಮೂಲಕ ನಾವು ಉನ್ನತ ಮಟ್ಟಕ್ಕೆ ಏರುತ್ತೇವೆ ಎಂದು ನಟ ಅಕ್ಷಯ್ ಕುಮಾರ್ ಅಭಿಪ್ರಾಯಪಡುತ್ತಾರೆ.