Widgets Magazine

ಕೇದಾರನಾಥ್ ಚಿತ್ರದಲ್ಲಿ ಸಾರಾ ಅಲಿ ಖಾನ್ ಲುಕ್ ಇಷ್ಟವಾಗದೇ ಕರೀನಾ ಕಪೂರ್ ಮಾಡಿದ್ದೇನು ಗೊತ್ತಾ?

ಮುಂಬೈ| pavithra| Last Modified ಭಾನುವಾರ, 15 ಜುಲೈ 2018 (06:20 IST)
ಮುಂಬೈ : ಕೇದಾರನಾಥ್ ಚಿತ್ರದಲ್ಲಿ ನಟ ಸೈಫ್ ಅಲಿ ಖಾನ್ ಮಗಳು ನಟಿ ಸಾರಾ ಅಲಿ ಖಾನ್ ಅವರ ಲುಕ್ ಅವರ ಚಿಕ್ಕಮ್ಮ ನಟಿ ಕರೀನಾ ಕಪೂರ್ ಅವರಿಗೆ ಇಷ್ಟವಾಗಲಿಲ್ಲವಂತೆ. ಆ ಕಾರಣಕ್ಕಾಗಿ ನಟಿ ಕರೀನಾ ಅವರು ತಮ್ಮ ಮಗಳಾದ ನಟಿ ಸಾರಾ ಅಲಿ ಖಾನ್ ಗೆ ಸಹಾಯ ಮಾಡಿದ್ದಾರಂತೆ.


ಹೌದು. ನಟಿ ಸಾರಾ ಅಲಿ ಖಾನ್ ಅವರು ಕೇದಾರನಾಥ್ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿಕೊಡುತ್ತಿದ್ದಾರೆ. ಆದರೆ ಈ ಚಿತ್ರದ ಸೀನ್ ಗಳಲ್ಲಿ ನಟಿ ಸಾರಾ ಸುಂದರವಾಗಿ ಕಾಣಿಸುತ್ತಿಲ್ಲವಂತೆ. ಆದ ಕಾರಣ ನಟಿ ಕರೀನಾ ಕಪೂರ್ ಅವರು ತಮ್ಮ ಸ್ಟೈಲಿಸ್ಟ್ ಹಾಗೂ ಮೇಕಪ್ ಮೆನ್ ರನ್ನು ಸಾರಾ ಬಳಿ ಕಳುಹಿಸಿದ್ದಾರಂತೆ. ತನ್ನ ಮೊದಲ ಚಿತ್ರದಲ್ಲಿ ಮಗಳು ನಟಿ ಸಾರಾ ಅಲಿ ಖಾನ್ ಅವರು ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ ನಟಿ ಕರೀನಾ ಕಪೂರ್ ಈ ರೀತಿ ಸಹಾಯ ಮಾಡಿದ್ದಾರಂತೆ.


ಸದ್ಯ ಕರೀನಾ ಅವರ ಮೇಕಪ್ ಮೆನ್ ಸಾರಾ ಅವರಿಗೆ ಚೆನ್ನಾಗಿ ಮೇಕಪ್ ಮಾಡಿದ್ದಾರಂತೆ. ಕೇದಾರನಾಥ್ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣ ನಡೆದಿದ್ದು,ಕ್ಲೈಮ್ಯಾಕ್ಸ್ ನಲ್ಲಿ ಸಾರಾ ಸುಂದರವಾಗಿ ಕಾಣ್ತಾರಂತೆ. ಸಾರಾ ಸ್ಪೆಷಲ್ ಆಗಿ ಕಾಣಲು ಕರೀನಾ ಹಾಗೂ ಮೇಕಪ್ ಮೆನ್ ಕಾರಣವಂತೆ . ಕರೀನಾ ಅವರು ಕ್ಲೈಮ್ಯಾಕ್ಸ್ ದೃಶ್ಯದ ಮೇಕಪ್ ಗೆ ಹೆಚ್ಚು ಗಮನ ನೀಡಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :