ಸಾಕ್ಷ್ಯಂ ಚಿತ್ರದಲ್ಲಿ ಪೂಜಾ ಹೆಗಡೆ ಗ್ಲಾಮರಸ್ ಆಗಿ ಕಾಣದೇ ಇರುವುದಕ್ಕೆ ಕಾರಣ ಯಾರು ಗೊತ್ತೇ?

ಚೆನ್ನೈ| pavithra| Last Modified ಬುಧವಾರ, 8 ಆಗಸ್ಟ್ 2018 (17:54 IST)
ಚೆನ್ನೈ: ನಟಿ ಪೂಜಾ ಹೆಗಡೆ ಇದೀಗ ತೆಲುಗಿನ 'ಸಾಕ್ಷ್ಯಂ' ಚಿತ್ರದ ನಿರ್ಮಾಪಕರು ಹಾಗೂ ನಿರ್ದೇಶಕರ ವಿರುದ್ಧ ಗರಂ ಆಗಿದ್ದಾರೆ. ಈ ಚಿತ್ರದಲ್ಲಿ ನಾನು ಗ್ಲಾಮರಸ್‌ ಆಗಿ ಕಾಣದಿರಲು ಅವರೇ ಕಾರಣ ಎಂದು ದೂರಿದ್ದಾರೆ.

'ಸಾಕ್ಷ್ಯಂ' ಚಿತ್ರವನ್ನು ಬಾಹುಬಲಿ ರೇಂಜ್‌ನಲ್ಲಿ ತೆಗೆಯುವುದಾಗಿ ನಿರ್ದೇಶಕರು ಪೂಜಾಗೆ ಹೇಳಿದ್ದರಂತೆ. ಆದರೆ ಸಿನಿಮಾವನ್ನು ಕೆಟ್ಟದ್ದಾಗಿ ಚಿತ್ರಿಸಿ ನನ್ನನ್ನು ಕೂಡ ಡಲ್ಲಾಗಿ ತೋರಿಸಿದ್ದಾರೆ ಎಂದು ಪೂಜಾ ಕಿಡಿಕಾರಿದ್ದಾರೆ.

ಜತೆಗೆ ತಮ್ಮ ಟೀಂ ವಿರುದ್ಧವೂ ಕಿಡಿ ಕಾರಿದ್ದಾರೆ ಪೂಜಾ. ಕಥೆ ಕೇಳುವಾಗಲೇ ತಮ್ಮ ತಂಡವನ್ನು ಜತೆಯಲ್ಲಿಟ್ಟುಕೊಳ್ಳುವ ಅವರು ನಂತರ ಕಥೆ, ನಿರ್ದೇಶಕರು ಹಾಗೂ ಬ್ಯಾನರ್‌ ಬಗ್ಗೆ ಮಾಹಿತಿ ಪಡೆಯುತ್ತಾರಂತೆ. ಆದರೆ 'ಸಾಕ್ಷ್ಯಂ' ತಂಡದ ಬಗ್ಗೆ ಟೀಂ ಒಳ್ಳೆಯ ಫೀಡ್‌ಬ್ಯಾಕ್‌ ನೀಡಿತ್ತಂತೆ. ಹೀಗಾಗಿ ತಂಡದ ಮೇಲೂ ಪೂಜಾ ಹೆಗಡೆ ಫುಲ್ ಗರಂ ಆಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :