ಬಾಲಿವುಡ್ ನಟಿ ಶ್ರೀದೇವಿ ಸಾವಿನ ಬಗ್ಗೆ ಸ್ಪೋಟಕ ಮಾಹಿತಿ ಹೊರ ಹಾಕಿದ ಮಾಜಿ ಪೊಲೀಸ್ ಅಧಿಕಾರಿ!

ನವದೆಹಲಿ, ಬುಧವಾರ, 10 ಜುಲೈ 2019 (09:32 IST)

ನವದೆಹಲಿ: ದುಬೈ ಹೋಟೆಲ್ ಕೊಠಡಿಯಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದ ಬಾಲಿವುಡ್ ನಟಿ ಶ್ರೀದೇವಿಯದ್ದು ಕೊಲೆಯಾಗಿತ್ತು ಎಂದು ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಸ್ಪೋಟಕ ಮಾಹಿತಿ ಹೊರ ಹಾಕಿದ್ದಾರೆ.


 
ಕೇರಳದ ಜೈಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಈಗ ನಿವೃತ್ತಿಯಾಗಿರುವ ರಿಷಿರಾಜ್ ಸಿಂಗ್ ಈ ಬಾಂಬ್ ಸಿಡಿಸಿದ್ದಾರೆ. ದುಬೈ ಹೋಟೆಲ್ ನಲ್ಲಿ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಶ್ರೀದೇವಿ ಸಾವನ್ನಪ್ಪಿದ್ದರು ಎಂದು ಅಂದು ಮರಣೋತ್ತರ ಪರೀಕ್ಷೆಯಲ್ಲೂ ಹೇಳಲಾಗಿತ್ತು. ಆಗ ಇದು ಕೊಲೆಯಾಗಿರಬಹುದೇ ಎಂಬ ಅನುಮಾನಗಳನ್ನೆಲ್ಲಾ ಅವರ ಕುಟುಂಬ ಸದಸ್ಯರೇ ತಳ್ಳಿ ಹಾಕಿದ್ದರು.
 
ಆದರೆ ಇದೀಗ ಮಾಜಿ ಡಿಜಿಪಿ ರಿಷಿರಾಜ್ ಸಿಂಗ್ ಫೊರೆನ್ಸಿಕ್ ತಜ್ಞನಾಗಿ ಹಲವು ಪ್ರಕರಣಗಳನ್ನು ಬೇಧಿಸಿದ ತಮ್ಮ ಸ್ನೇಹಿತ ಡಾ. ಉಮಾದಾತನ್ ಅವರ ಅನುಮಾನದ ಪ್ರಕಾರ ಈ ಆರೋಪ ಮಾಡಿದ್ದಾರೆ. ಉಮಾದಾತನ್ ಪ್ರಕಾರ ಇದು ಕೊಲೆಯಾಗಿದ್ದಿರಬಹುದು. ಯಾಕೆಂದರೆ ಒಬ್ಬ ವ್ಯಕ್ತಿ ಎಷ್ಟೇ ಮದ್ಯಪಾನ ಮಾಡಿದ್ದರೂ ಒಂದು ಅಡಿ ಆಳದ ನೀರಿಗೆ ಬಿದ್ದು ಸಂಪೂರ್ಣವಾಗಿ ಮುಳುಗಿ ಸಾವನ್ನಪ್ಪಲು ಸಾಧ್ಯವಿಲ್ಲ. ಒಂದೋ ಆಕೆಯನ್ನು ಯಾರಾದರೂ ತಳ್ಳಿರಬೇಕು ಎಂದು ಉಮಾದಾತನ್ ಅಭಿಪ್ರಾಯಪಟ್ಟಿರುವುದಾಗಿ ರಿಷಿರಾಜ್ ಸಿಂಗ್ ಹೇಳಿದ್ದಾರೆ. ಸ್ನೇಹಿತನ ಸಾಕ್ಷ್ಯಗಳ ಪ್ರಕಾರ ರಿಷಿರಾಜ್ ಸಿಂಗ್ ಕೇರಳದ ಮಾಧ್ಯಮವೊಂದಕ್ಕೆ ಬರೆದ ಲೇಖನದಲ್ಲಿ ಈ ವಾದ ಮಂಡಿಸಿದ್ದಾರೆ. ರಿಷಿರಾಜ್ ಸಿಂಗ್ ರ ಈ ಹೇಳಿಕೆ ಈಗ ಸಂಚಲನ ಮೂಡಿಸಿದೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮೈಸೂರು ಅಭಿಮಾನಿಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಬೆಂಗಳೂರು: ಯುವರತ್ನ ಸಿನಿಮಾ ಶೂಟಿಂಗ್ ಸಂದರ್ಭ ಮೈಸೂರಿನಲ್ಲಿ ಕೆಲವು ದಿನ ಕಳೆದಿದ್ದ ಪುನೀತ್ ರಾಜ್ ಕುಮಾರ್ ...

news

ಪ್ರಭುದೇವ, ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡಿ ಟ್ರೋಲ್ ಗೊಳಗಾದ ಸಲ್ಮಾನ್ ಖಾನ್

ಮುಂಬೈ: ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ...

news

ಮಾಸ್ ಮಾತ್ರವಲ್ಲದೆ ಮನರಂಜನೆಯಲ್ಲಿಯೂ ಪಾಸ್ ಆಗಲಿದ್ದಾನೆ `ಸಿಂಗ’!

ಸಿನಿಮಾ ಮಾಸ್, ಕ್ಲಾಸ್ ಏನೇ ಇರಲಿ. ಒಂದಿಡೀ ಚಿತ್ರ ಮನರಂಜನೆಯತ್ತ ಫೋಕಸ್ ಮಾಡದಿದ್ದರೆ ಪುಷ್ಕಳ ಗೆಲುವು ...

news

ಹಳ್ಳಿ ಹಿನ್ನೆಲೆಯಲ್ಲಿ `ಸಿಂಗ’ನ ಸಾಹಸ!

ಈಗ ಎತ್ತ ನೋಡಿದರೂ ಸಿಂಗನದ್ದೇ ಸದ್ದು. ಟ್ರೈಲರ್ ಮತ್ತು ಹಾಡಿನ ಮೂಲಕ ಭಾರೀ ಕ್ರೇಜ್ ಹುಟ್ಟು ಹಾಕಿರೋ ...