ಮುಂಬೈ : ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಸಿನಿಮಾ ತಾರೆಯರೇ ಸಕ್ರಿಯವಾಗಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬಾಲಿವುಡ್ ನಟ ಫರಾನ್ ಅಖ್ತರ್ ಅವರು ಮಾತ್ರ ಸಾಮಾಜಿಕ ಜಾಲತಾಣಗಳಲ್ಲೊಂದಾದ ತಮ್ಮ ಫೇಸ್ ಬುಕ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ಈ ಬಗ್ಗೆ ಅವರು ಟ್ವೀಟರ್ ನಲ್ಲಿ ಮಾಹಿತಿ ನೀಡಿದ್ದು, ಫೇಸ್ಬುಕ್ ವೈಯಕ್ತಿಕ ಅಕೌಂಟ್ ರದ್ದು ಮಾಡ್ತಿದ್ದೇನೆ. ಅದಕ್ಕೆ ಎಂದೂ ವಾಪಸ್ ಆಗಲ್ಲ. ಆದ್ರೆ ಅಭಿಮಾನಿಗಳ ಪೇಜ್ FarhanAkhtarLive page ಡಿಲೀಟ್ ಮಾಡುವುದಿಲ್ಲ