Widgets Magazine

ಕೊರೋನಾ ವಾರಿಯರ್ಸ್ ಗೆ ಪಿಪಿಇ ಕಿಟ್ ನೀಡಿದ ನಟ, ನಿರ್ದೇಶಕ ಫರ್ಹಾನ್ ಅಖ್ತರ್

ಮುಂಬೈ| Krishnaveni K| Last Modified ಶುಕ್ರವಾರ, 8 ಮೇ 2020 (10:43 IST)
ಮುಂಬೈ: ಕೊರೋನಾ ವಿರುದ್ಧ ಹೋರಾಡುತ್ತಿದ್ದ ಆರೋಗ್ಯ ಕಾರ್ಯಕರ್ತರಿಗೆ ಬಾಲಿವುಡ್ ನಟ, ನಿರ್ದೇಶಕ ಫರ್ಹಾನ್ ಅಖ್ತರ್ ಪಿಪಿಇ ಕಿಟ್ ವಿತರಿಸಿದ್ದಾರೆ.
 

ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಆರೋಗ್ಯ ಕಾರ್ಯಕರ್ತರಿಗಾಗಿ ಫರ್ಹಾನ್ ಸುಮಾರು 1 ಸಾವಿರ ಪಿಪಿಇ ಕಿಟ್ ಗಳನ್ನು ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
 
ಸರ್ಕಾರಿ ಆಸ್ಪತ್ರೆಗಳಲ್ಲಿ ಎಷ್ಟೋ ಆರೋಗ್ಯ ಕಾರ್ಯಕರ್ತರಿಗೆ ಸರಿಯಾದ ಸುರಕ್ಷತಾ ವ್ಯವಸ್ಥೆಗಳೇ ಇಲ್ಲ. ಹೀಗಾಗಿ ಇವರಿಗೆ ಫರ್ಹಾನ್ ನೆರವಾಗಿದ್ದಾರೆ. ಜತೆಗೆ ನೀವೂ ನಿಮ್ಮ ಕೈಲಾದ ನೆರವು ನೀಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :