ಗುರುನಂದನ್. ಕನ್ನಡ ಕಿರುತೆರೆಯ ಮೂಲಕ ಚಂದನವನಕ್ಕೆ ಕಾಲಿಟ್ಟ ಸುರ ಸುಂದರಾಂಗ. ಧಾರಾವಾಹಿಗಳಲ್ಲಿ ಅಭಿನಯಿಸ್ದರೂ ಗುರುನಂದನ್ ಅವರನ್ನು ಜನ ಗುರುತಿಸಿದ್ದು ಮಾತ್ರ ಫಸ್ಟ್ ರ್ಯಾಂಕ್ ರಾಜು ಸಿನಿಮಾದ ಮೂಲಕವೇ. ಮೊದಲ ಸಿನಿಮಾದಲ್ಲಿ ತನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ಮರಳು ಮಾಡಿದ ಗುರುನಂದನ್ ಇದೀಗ ಮತ್ತೊಂದು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.