ಐಶ್ವರ್ಯಾ ರೈ ವಿವಾದಕ್ಕೀಡಾದ ವಿವೇಕ್ ಓಬೇರಾಯ್ ರನ್ನು ಸಲ್ಮಾನ್ ಖಾನ್ ಯಾವತ್ತೂ ಕ್ಷಮಿಸಲ್ವಂತೆ!

ಮುಂಬೈ, ಬುಧವಾರ, 22 ಮೇ 2019 (08:30 IST)

ಮುಂಬೈ: ಐ‍ಶ್ವರ್ಯಾ ರೈ ಜತೆ ಡೇಟಿಂಗ್ ಮಾಡುತ್ತಿದ್ದಾಗ ಸಲ್ಮಾನ್ ಖಾನ್ ನನ್ನ ಮೇಲೆ ಹಲ್ಲೆ ಮಾಡಲು ಬಂದರು ಎಂದು ಸುಖಾ ಸುಮ್ಮನೇ ಹೇಳಿ ಸಲ್ಲು ಬಾಯ್ ಕೆಂಗಣ್ಣಿಗೆ ಗುರಿಯಾಗಿದ್ದ ವಿವೇಕ್ ಓಬೇರಾಯ್ ಇದೀಗ ಮತ್ತೆ ಐಶ್ವರ್ಯಾರನ್ನು ಎಕ್ಸಿಟ್ ಪೋಲ್ ವಿಚಾರದಲ್ಲಿ ತಮಾಷೆ ಮಾಡಲು ಹೋಗಿ ಕ್ಷಮೆ ಕೇಳಬೇಕಾಗಿ ಬಂದಿದ್ದು ಎಲ್ಲರಿಗೂ ಗೊತ್ತೇ ಇದೆ.
 


ಅಂದು ಸಲ್ಮಾನ್ ಮೇಲೆ ಆರೋಪ ಮಾಡಿದ್ದಕ್ಕೆ ಇಂದಿಗೂ ವಿವೇಕ್ ಗೆ ಕ್ಷಮೆ ಸಿಕ್ಕಿಲ್ಲ. ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ ಸಲ್ಮಾನ್ ಇಂದಿಗೂ ವಿವೇಕ್ ನಿಂದ ದೂರವೇ ಇದ್ದಾರೆ.
 
ಇದೀಗ ಮತ್ತೆ ಎಕ್ಸಿಟ್ ಪೋಲ್ ವಿಚಾರದಲ್ಲಿ ಐ‍ಶ್ವರ್ಯಾರನ್ನು ಸಲ್ಮಾನ್, ಅಭಿಷೇಕ್ ಬಚ್ಚನ್ ಮತ್ತು ತಮ್ಮ ಜತೆಗೆ ಫೋಟೋ ಹಾಕಿ ತಮಾಷೆ ಮಾಡಿದ್ದ ವಿವೇಕ್ ಒಬೇರಾಯ್ ಗೆ ಮಹಿಳಾ ಆಯೋಗದಿಂದಲೂ ನೋಟಿಸ್‍ ಜಾರಿಯಾಗಿತ್ತು. ವಿವಾದದ ಬಳಿಕ ವಿವೇಕ್ ಇದೀಗ ಟ್ವೀಟ್ ಡಿಲೀಟ್ ಮಾಡಿ ಬಹಿರಂಗವಾಗಿ ಕ್ಷಮೆ ಯಾಚಿಸಿದ್ದಾರೆ.
 
ಆದರೆ ಈಗ ಸಲ್ಮಾನ್ ಗೆ ವಿವೇಕ್ ರನ್ನು ಯಾಕೆ ಕ್ಷಮಿಸಲ್ಲ ಎಂದು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. ‘ಶಾರುಖ್, ಅಭಿಷೇಕ್ ಬಚ್ಚನ್ ರನ್ನು ಕ್ಷಮಿಸಿ ಅವರ ಜತೆ ಶೇಕ್ ಹ್ಯಾಂಡ್ ಮಾಡಿದ್ದೇನೆ. ಆದರೆ ಈ ವ್ಯಕ್ತಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದರೂ ಅದನ್ನು ಸ್ವೀಕರಿಸದೇ ಆತನಿಂದ ದೂರವಿರುವುದೇ ಒಳ್ಳೆಯದು ಎನಿಸಿತು. ಈತ ಕ್ಷಮೆ ಯಾಚಿಸಿದರೂ ಅದನ್ನು ಸ್ವೀಕರಿಸಲ್ಲ. ಅದರ ಬದಲು ಆತ ನನ್ನ ಬಗ್ಗೆ ಸಲ್ಮಾನ್ ನನ್ನ ಕ್ಷಮೆ ಸ್ವೀಕರಿಸಲ್ಲ ಎಂದು ಮಾಡುವ ಆರೋಪವನ್ನೇ ಸ್ವೀಕರಿಸುವೆ’ ಎಂದು ಸಲ್ಮಾನ್ ಕಟುವಾಗಿ ಹೇಳಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬಾಲಿವುಡ್ ನ ಮತ್ತೊಬ್ಬ ಸ್ಟಾರ್ ನಟನ ದಾಂಪತ್ಯ ಬದುಕು ಅಂತ್ಯ?!

ಮುಂಬೈ: ಸೆಲೆಬ್ರಿಟಿಗಳಲ್ಲಿ ಮದುವೆ, ಬ್ರೇಕ್ ಅಪ್ ಎನ್ನುವುದೆಲ್ಲಾ ಸಾಮಾನ್ಯ. ಇದೀಗ ಬಾಲಿವುಡ್ ನಲ್ಲಿ ಒಂದು ...

news

ಮದುವೆ ಸಂಭ್ರಮ ಬಳಿಕ ಯುವರತ್ನ ಶೂಟಿಂಗ್ ಗೆ ಹಾಜರಾಗಲಿರುವ ಪುನೀತ್ ರಾಜ್ ಕುಮಾರ್

ಬೆಂಗಳೂರು: ಡಾ. ರಾಜ್ ಕುಟುಂಬದಲ್ಲಿ ಈಗ ಮದುವೆ ಸಂಭ್ರಮ ಕಳೆಗಟ್ಟಿದೆ. ರಾಘವೇಂದ್ರ ರಾಜ್ ಕುಮಾರ್ ಪುತ್ರ ...

news

ಐಶ್ವರ್ಯಾ ರೈಯನ್ನೇ ತಮಾಷೆ ಮಾಡಿದ ಮಾಜಿ ಗೆಳೆಯ ವಿವೇಕ್ ಓಬೇರಾಯ್ ಗೆ ನೋಟಿಸ್!

ಮುಂಬೈ: ವಿವೇಕ್ ಓಬೇರಾಯ್ ಮತ್ತು ಐ‍ಶ್ವರ್ಯಾ ರೈ ಒಂದು ಕಾಲದಲ್ಲಿ ಡೇಟಿಂಗ್ ಮಾಡುತ್ತಿದ್ದ ವಿಚಾರ ಎಲ್ಲರಿಗೂ ...

news

ಕಿಚ್ಚ ಸುದೀಪ್ ಮಗಳಿಗೆ ವಿಶ್ ಮಾಡಿದ ಖ್ಯಾತ ಖಳನಟ ಯಾರು ಗೊತ್ತೇ?

ಬೆಂಗಳೂರು: ಕಿಚ್ಚ ಸುದೀಪ್ ನಿನ್ನೆ ಇಡೀ ದಿನ ಫ್ಯಾಮಿಲಿಗಾಗಿ ಮೀಸಲಿಟ್ಟಿದ್ದರು. ಮಗಳು ಸಾನ್ವಿ ಬರ್ತ್ ...