ಕೇರಳ : ಮಾಲಿವುಡ್ ಮೆಗಾ ಸ್ಟಾರ್ ಮಮ್ಮುಟಿ ಅವರ ಕುರಿತು ಸಮಾರಂಭವೊಂದರಲ್ಲಿ ಖ್ಯಾತ ನಿರ್ದೇಶಕರೊಬ್ಬರು ಮಾತನಾಡಿದ ರೀತಿ ಎಲ್ಲರ ಮುಖದಲ್ಲೂ ನಗು ತರಿಸುವಂತಿದ್ದರೂ ಕೂಡ ಖ್ಯಾತ ನಿರ್ದೇಶಕರಾಗಿ ಹೀಗೆ ಮಾತನಾಡಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಕೂಡ ಈಗ ಕೇಳಿಬರುತ್ತಿದೆ. ನಟ ಮಮ್ಮುಟಿ ಪ್ರಧಾನ ಪಾತ್ರದಲ್ಲಿ ಅಭಿನಯಿಸುತ್ತಿರುವ, ರಾಮ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ತಮಿಳು ಚಿತ್ರ ಪೆರೆನ್ಬು ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವನ್ನು ಕಳೆದ ಭಾನುವಾರ ಚೆನ್ನೈನಲ್ಲಿ ಹಮ್ಮಿಕೊಳ್ಳಲಾಗಿತ್ತು.