ಅಕ್ರಮ ರೇವು ಪಾರ್ಟಿ: ಬಿಗ್ ಬಾಸ್ ಸ್ಪರ್ಧಿ, ನಟಿಯರು ವಶಕ್ಕೆ

Bangalore| Ramya kosira| Last Updated: ಮಂಗಳವಾರ, 29 ಜೂನ್ 2021 (13:04 IST)
ಮಹಾರಾಷ್ಟ್ರ:ನಾಸಿಕ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರೇವು ಪಾರ್ಟಿ ಅಡ್ಡೆ ಮೇಲೆ ಭಾನುವಾರ ಪೊಲೀಸರು ದಾಳಿ ಮಾಡಿದ್ದು, ಸುಮಾರು 22 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಡ್ರಗ್ಸ್ ಪತ್ತೆಯಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ.
ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಇಗತ್ಪುರಿಯಲ್ಲಿರುವ ಎರಡು ಖಾಸಗಿ ವಿಲ್ಲಾಗಳಲ್ಲಿ ರೇವು ಪಾರ್ಟಿ ನಡೆಯುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದರು. ಈ ದಾಳಿಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೇರಿದಂತೆ ಹಿಂದಿ ಸಿನಿಮಾ ಕಲಾವಿದರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.>


ಇದರಲ್ಲಿ ಇನ್ನಷ್ಟು ಓದಿ :