ಏಜ್ ಈಜ್ ಜಸ್ಟ್ 20 ಅಂತಾರೆ ದಿಶಾ ಪಠಾನಿ.. ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಿದ್ದಾಳಂತೆ ದಿಶಾ?

ಮುಂಬೈ, ಬುಧವಾರ, 20 ಜುಲೈ 2016 (16:46 IST)

ಬಾಲಿವುಡ್‌ನಲ್ಲಿ ಕೆಲ ಸೆಲೆಬ್ರಿಟಿಗಳು ತಮ್ಮ ವಯಸ್ಸಿನ ಬಗ್ಗೆ ಬೋಲ್ಡ್ ಆಗಿ ಸ್ಟೆಟ್‌ಮೆಂಟ್ ಕೊಟ್ರೆ ಮತ್ತೆ ಕೆಲವರು ತಮ್ಮ ಏಜ್‌ನ್ನು ಮರೆಮಾಚಲು ಯತ್ನಿಸುತ್ತಾರೆ. ಇದಕ್ಕೆ ಹೊರತಾಗಿಲ್ಲ ನಟಿ ದಿಶಾ ಪಠಾನಿ.. ಸದಾ ಟೈಗರ್ ಶ್ರಾಫ್ ಜತೆಗೆ ಡೇಟಿಂಗ್ ನಡೆಸುವ ವಿಚಾರದಲ್ಲಿ ಸುದ್ದಿಯಾಗುವ ದಿಶಾಗೆ ಯಾಕೋ ಏಜ್ ವಿಷಯದಲ್ಲಿ ಬೋಲ್ಡ್ ಸ್ಟೇಟ್‌ಮೆಂಟ್ ನೀಡಲು ಹಿಂಜರಿಯುವಂತಿದೆ. 

 
ಬಾಲಿವುಡ್ ನಟಿ, ರೂಪದರ್ಶಿ ದಿಶಾ ಪಠಾನಿ ಹೆಸರು ಕೇಳಿರಬಹುದು. 2012ರಲ್ಲಿ ಮಿಸ್ ಇಂದೋರ್ ಸ್ಪರ್ಧಿಯಾಗಿದ್ದ ಅವರು, ತಮ್ಮ ವಯಸ್ಸನ್ನು 20 ಎಂದು ಹೇಳಿಕೊಳ್ಳುತ್ತಿದ್ದಾಳಂತೆ.. ಈ ಮೂಲಕ ತಾನಿನ್ನೂ ಚಿಕ್ಕವಳು ಎಂಬುದು ದಿಶಾ ಪಠಾನಿಯ ಅಭಿಪ್ರಾಯ.
 
ಆದರೆ ಕೆಲವರು ಹೇಳುವ ಪ್ರಕಾರ, ದಿಶಾ ಪಠಾನಿ ತಮ್ಮ ವಯಸ್ಸನ್ನು ಮರೆಮಾಚುತ್ತಿದ್ದಾಳೆ. ಅದಕ್ಕಾಗಿ ಅವರು ತಮ್ಮ ವಯಸ್ಸಿನ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ ಎನ್ನುತ್ತಿದ್ದಾರಂತೆ. ಆದ್ರೆ ಇದನ್ನು ಕೇಳಿದ ದಿಶಾ ಅಭಿಮಾನಿಗಳಂತೂ ದಿಶಾ ಸುಳ್ಳು ಹೇಳುತ್ತಿರುವ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರಂತೆ.

ಈ ಹಿಂದೆ ದಿಶಾ ಪಠಾನಿ ಹಾಗೂ ಟೈಗರ್ ಡೈಟಿಂಗ್ ನಡೆಸುತ್ತಿದ್ದಾರೆ ಎಂದು ವದಂತಿಗಳು ಹರಡಿದ್ದವು. ನಾವಿಬ್ಬರು ಉತ್ತಮ ಸ್ನೇಪಿತರು, ದಿಶಾ ನನ್ನ ಫ್ರೆಂಡ್ ಅಂತ ಟೈಗರ್ ತಿಳಿಸಿದ್ದರು. ನಾವಿಬ್ಬರು ಒಟ್ಟಿಗೆ ಜತೆಯಾಗಿ ಹೋಗುತ್ತೇವೆ ಎಂದು ಹೇಳಿಕೊಂಡಿದ್ದರು. ಈ ಹಿಂದೆ ಟೈಗರ್ ದಿಶಾಗಾಗಿ ಚೀನಾಕ್ಕೆ ಪ್ರಯಾಣ ಬೆಳೆಸಿದ್ದರು. ದಿಶಾ ಜತೆಗೆ ಟೈಮ್ ಸ್ಪೆಂಡ್ ಮಾಡುವುದು ನನಗೆ ಇಷ್ಟ ಎಂದು ಟೈಗರ್ ಹೇಳಿಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಬೆಂಗಳೂರಿನ ಪಂಚತಾರಾ ಹೊಟೇಲ್‌ಗಳಲ್ಲಿ 'ಕಬಾಲಿ' ಪ್ರದರ್ಶನ

ಕಬಾಲಿ ಫೀವರ್ ಎಲ್ಲೆಲ್ಲೂ ಜೋರಾಗಿ ಕೇಳಿಬರುತ್ತಿದೆ. ಬಹುದಿನಗಳಿಂದ 'ಕಬಾಲಿ' ಚಿತ್ರದ ರಿಲೀಸ್‌ಗಾಗಿ ...

news

ಕಬಾಲಿ ಚಿತ್ರ ಆನ್‌ಲೈನ್‌ನಲ್ಲಿ ಲೀಕ್ ಆಗಿಲ್ಲ ಎಂದ ಚಿತ್ರತಂಡ

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಶುಕ್ರವಾರದಂದು ಬಿಡುಗಡೆಯಾಗುತ್ತಿದೆ. ಚಿತ್ರ ...

news

'ವೀರ್ ದಿ ವೆಡ್ಡಿಂಗ್' ಶೂಟಿಂಗ್ ಎಂಜಾಯ್ ಮಾಡುತ್ತಿದ್ದಾಳಂತೆ ಬೆಬೋ

ಮುಂಬರುವ ಚಿತ್ರ 'ವೀರ್ ದಿ ವೆಡ್ಡಿಂಗ್' ಚಿತ್ರದಲ್ಲಿ ಕರೀನಾ ಅಭಿನಯಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ...

news

'ರುಸ್ತುಮ್' ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಹಾಡು ಬಿಡುಗಡೆ

ಖಿಲಾಡಿ ಹಿರೋ ಅಕ್ಷಯ್ ಅಭಿನಯದ ಬಹು ನಿರೀಕ್ಷಿತ 'ರುಸ್ತುಮ್' ಚಿತ್ರದ ಮತ್ತೊಂದು ರೋಮ್ಯಾಂಟಿಕ್ ಸಾಂಗ್ ...