ಹೈದರಾಬಾದ್: ಟಾಲಿವುಡ್ ನ ಸೂಪರ್ ಸ್ಟಾರ್ ಪ್ರಭಾಸ್ ಅಭಿನಯಿಸುತ್ತಿರುವ ಸಾಹೋ ಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಆದರೆ ಈ ಮಧ್ಯ ಸಾಹೋ ಚಿತ್ರದ ನಿರ್ದೇಶಕರಾದ ಸುಜಿತ್ ಹಾಗೂ ನಾಯಕ ಪ್ರಭಾಸ್ ಅವರ ನಡುವೆ ಸಿನಿಮಾದ ಬಗ್ಗೆಗಿನ ಕೆಲವು ವಿಷಯಕ್ಕೆ ಜಗಳವಾಗಿ ಚಿತ್ರೀಕರಣ ನಿಲ್ಲಿಸಲಾಗಿದೆ ಎಂಬ ಗಾಸಿಪ್ ಕೇಳಿಬಂದಿದೆ. ನಿರ್ದೇಶಕ ಸುಜಿತ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಬಾಲಿವುಡ್ ನಟಿ ಶ್ರದ್ದಾ ಕಪೂರ್ ಅವರು ನಟಿಸುತ್ತಿದ್ದಾರೆ. ಈ