ಮುಂಬೈ: ರಂಗೀಲಾ ಚಿತ್ರದಿಂದ ಅಭಿಮಾನಿಗಳ ಮನಗೆದ್ದ ನಟಿ ಊರ್ಮಿಳಾ ಮಾತೋಂಡ್ಕರ್ ತಮ್ಮ ವೈಯಕ್ತಿಕ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಅದೇನಪ್ಪಾ ಅಂದ್ರೆ ಊರ್ಮಿಳಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದೆಯಂತೆ. ಉದ್ಯಮಿ ಮೋಸಿನ್ ಕಸ್ತರ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಳಿಕ ಬಣ್ಣದ ಬದುಕಿನಿಂದ ದೂರವಿದ್ದ ಊರ್ಮಿಳಾ ಮತ್ತೆ ಬಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಊರ್ಮಿಳಾ ಅವರ ದಾಂಪತ್ಯ ಬದುಕಿನಲ್ಲಿ ಬಿರುಕು ಕಾಣಿಸಿಕೊಂಡಿರುವುದು ತಿಳಿದುಬಂದಿದೆ.ಊರ್ಮಿಳಾರ ಪತಿ ತುಂಬಾ ಕೋಪಿಷ್ಠನಂತೆ. ನಟಿಗೆ ಕಿರುಕುಳ ಆಗುತ್ತಿದೆಯಂತೆ.