ಮುಂಬೈ: ನಟಿ ಇಶಾ ಗುಪ್ತ ಈ ಬಾರಿ ಸಿರಿಯಾ ಬಿಕ್ಕಟ್ಟು ಕುರಿತು ಮಾಡಿದ ಟ್ವೀಟ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಇಶಾ ಗುಪ್ತ ಇತ್ತೀಚೆಗೆ ಟ್ವಿಟ್ಟರ್ನಲ್ಲಿ, ನಾನು ಯಾವ ದೇಶದವಳು ಅಥವಾ ಧರ್ಮದವಳು ಅಥವಾ ಯಾವ ಸರ್ಕಾರದವಳು ಎಂಬುದನ್ನು ಕೇರ್ ಮಾಡುವುದಿಲ್ಲ. ಮಾನವೀಯತೆ ಸಾಯುತ್ತಿದೆ. ಮಕ್ಕಳು ಸಾಯುತ್ತಿದ್ದಾಳೆ, ಇದು ನಿಲ್ಲಬೇಕು, ಸಿರಿಯಾದಲ್ಲಿ ರಕ್ತಪಾತ ನಡೆಯುತ್ತಿದೆ ಎಂದು ಬರೆದುಕೊಂಡಿದ್ದರು. ಅದರ ಜೊತೆಗೆ ಪುಟ್ಟ ಮಗುವೊಂದರ ಚಿತ್ರವನ್ನೂ ಪೋಸ್ಟ್ ಮಾಡಿದ್ದರು.