ಬೆಂಗಳೂರು : ಕನ್ನಡದ ಚಿತ್ರರಂಗದ ಖ್ಯಾತ ನಟ ನವರಸನಾಯಕ ಜಗ್ಗೇಶ್ ಅವರು ತಮ್ಮ ಮಗನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಅವರು ಈ ರೀತಿ ಮನವಿ ಮಾಡಲು ಒಂದು ಕಾರಣವಿದೆ. ಅದೇನೆಂದರೆ ಕೆ.ಶಿವಕುಮಾರ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ರಾಜು ದೇವಸಂದ್ರ ನಿರ್ದೇಶನ ಮಾಡುತ್ತಿರುವ ಗೋಸಿ ಗ್ಯಾಂಗ್ ಎಂಬ ಚಿತ್ರದಲ್ಲಿ ಜಗ್ಗೇಶ್ ಅವರ ಎರಡನೇ ಮಗ ಯತಿರಾಜ್ ಅವರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಡ್ರಗ್ ಮಾಫಿಯಾದ ಪಾತ್ರ ನಿರ್ವಹಿಸುತ್ತಿದ್ದಾರೆ.