ಮುಂಬೈ: ತಮಗನಿಸಿದ್ದನ್ನು ನೇರವಾಗಿ ಹೇಳುವ ಕಂಗನಾ ರನೌತ್ ಈ ಬಾರಿ ರಣಬೀರ್ ಕಪೂರ್, ಅಲಿಯಾ ಭಟ್ ಸೇರಿದಂತೆ ಸ್ಟಾರ್ ನಟರ ಮಕ್ಕಳ ಮೇಲೆ ಹರಿಹಾಯ್ದಿದ್ದಾರೆ.ಸ್ಟಾರ್ ನಟರ ಮಕ್ಕಳು ತಮ್ಮ ಲೈಂಗಿಕ ಜೀವನದ ಬಗ್ಗೆ ಬೇಕಾದರೆ ನಾಚಿಕೆ ಬಿಟ್ಟು ಮಾತನಾಡುತ್ತಾರೆ. ಆದರೆ ದೇಶದ ವಿಚಾರ ಬಂದರೆ ನಮಗೇಕೆ ಎನ್ನುವಂತಿರುತ್ತಾರೆ ಎಂದು ಕಂಗನಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.ಇನ್ನು ರಣಬೀರ್ ಕಪೂರ್, ಅಲಿಯಾ ಭಟ್ ರನ್ನು ಯುವ ನಟರು ಎನ್ನುವವರ ವಿರುದ್ಧವೂ ಕಂಗನಾ ವ್ಯಂಗ್ಯ ಮಾಡಿದ್ದಾರೆ.