ನಟಿ ಕಂಗನಾ ರನೌತ್ ಹಾಗು ಹೃತಿಕ್ ರೋಷನ್ ಅವರ ವಿವಾದದ ನಡುವೆಯು 2017 ರಲ್ಲಿ ಒಮ್ಮೆ ಕಂಗನಾ ನಾನು ಶೀಘ್ರದಲ್ಲೇ ವಿವಾಹವಾಗಲಿದ್ದೇನೆ ಎಂದು ಹೇಳಿ ತನ್ನ ಅಭಿಮಾನಿಗಳಿಗೆ ಆಶ್ಚರ್ಯ ಪಡಿಸಿದ್ದರು. ಆದರೆ ಈಗ, ಲೆಕ್ಮೆ ಫ್ಯಾಷನ್ ವೀಕ್ 2018 ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಾಲಿವುಡ್ ಫೈರ್ಬ್ರ್ಯಾಂಡ್ ಕಂಗನಾ, ಅವರ ಮದುವೆಯ ಯೋಜನೆಗಳ ಬಗ್ಗೆ ಮತ್ತೊಮ್ಮೆ ಮಾತನಾಡಿದ್ದಾರೆ, ಫೆಬ್ರವರಿ 2019 ರವರೆಗೆ ಸಮಯ ನೀಡಿ ಶೀಘ್ರದಲ್ಲೇ ಮದುವೆಯಾಗಲಿದ್ದೇನೆ ಎಂದು ಹೇಳಿದ್ದಾರೆ.