ಮುಂಬೈ: ಬಾಲಿವುಡ್ ನಟಿ ಕಂಗನಾ ರನಾವತ್ ತಮ್ಮ ಬಿಚ್ಚು ನುಡಿಗಳಿಂದಲೇ ಖ್ಯಾತರಾದವರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಕಂಗನಾ ಇದೀಗ ಕಾಂಗ್ರೆಸ್ ಪಕ್ಷ ಮತ್ತು ನಾಯಕಿ ಸೋನಿಯಾ ಗಾಂಧಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.ನಿನ್ನೆ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಕಂಗನಾ ನಾವು ಹಿಂದೆ ಇಟೆಲಿ ಸರ್ಕಾರದ ಸೇವಕರಾಗಿದ್ದೆವು. ಅಬ್ಬಾ.. ಈವತ್ತು ನಾವು ಸ್ವತಂತ್ರರಾಗಿದ್ದೇವೆ ಎಂದಿದ್ದಾರೆ.ನಿಜ ಹೇಳಬೇಕೆಂದರೆ ಭಾರತ ಇತ್ತೀಚೆಗಷ್ಟೇ ಸ್ವಂತತ್ರವಾಗಿದೆ. ಇದಕ್ಕೆ ಮೊದಲು ಮುಘಲರು, ಬ್ರಿಟಿಷ್, ಇಟೆಲಿ ಸರ್ಕಾರದ ದಾಸ್ಯದಲ್ಲಿತ್ತು.