ಬಿಕಿನಿ ತೊಟ್ಟಿದ್ದಕ್ಕೆ ಗಂಡ ಏನೂ ಹೇಳಲ್ವಾ? ಎಂದಿದ್ದಕ್ಕೆ ಕರೀನಾ ಕಪೂರ್ ಉತ್ತರ ಏನು ಗೊತ್ತಾ?!

ಮುಂಬೈ, ಗುರುವಾರ, 14 ಮಾರ್ಚ್ 2019 (09:25 IST)

ಮುಂಬೈ: ಮದುವೆಯಾಗಿ, ಮಗುವಾದ ಮೇಲೂ ಮೊದಲಿನ ಮಾದಕತೆ ಉಳಿಸಿಕೊಂಡಿರುವ ಕರೀನಾ ಕಪೂರ್ ತನ್ನ ಸೋಷಿಯಲ್ ಮೀಡಿಯಾ ಪುಟದಲ್ಲಿ ಪತಿ ಸೈಫ್ ಆಲಿ ಖಾನ್ ಜತೆಗೆ ಬಿಕಿನಿ ತೊಟ್ಟಿಕೊಂಡಿರುವ ಫೋಟೋ ಒಂದನ್ನು ಪ್ರಕಟಿಸಿ ಟ್ರೋಲ್ ಗೊಳಗಾಗಿದ್ದಾರೆ.


 
‘ಏನು ಹೇಳಬೇಕು ಸೈಫ್ ಆಲಿ ಖಾನ್ ನಿನಗೆ? ಹೆಂಡತಿಗೆ ಬಿಕಿನಿ ತೊಟ್ಟುಕೊಳ್ಳಲು ಬಿಟ್ಟಿದ್ದೀಯಲ್ಲಾ?’ ಎಂದು ಅಶ್ಲೀಲವಾಗಿ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದರು.
 
ಇದಕ್ಕೆ ಕರೀನಾ ಖಾರವಾಗಿ ತಿರುಗೇಟು ನೀಡಿದ್ದಾರೆ. ‘ಬಿಕಿನಿ ತೊಡಬೇಡ ಎನ್ನಲು ಸೈಫ್ ಯಾರು? ಸೈಫ್ ನನ್ನ ಬಳಿ ಬಿಕಿನಿ ತೊಡಬೇಡ, ಹೀಗೇ ಇರು, ಹಾಗೆಯೇ ಇರು ಎಂದು ಹೇಳುವಷ್ಟು ನಮ್ಮಿಬ್ಬರ ಸಂಬಂಧ ದುರ್ಬಲವಾಗಿಲ್ಲ. ಸೈಫ್ ಯಾವತ್ತೂ ಹಾಗೆ ಹೇಳಲ್ಲ. ನಾವಿಬ್ಬರೂ ಪರಸ್ಪರ ವಿಶ್ವಾಸ ಹೊಂದಿದ್ದೇವೆ’ ಎಂದು ಕರೀನಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ



ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಕಲರ್ಸ್ ಕನ್ನಡದಲ್ಲಿ ಕೆಜಿಎಫ್ ಡೇಟ್ ಅನೌನ್ಸ್ ಆಯ್ತು

ಬೆಂಗಳೂರು: ಕಲರ್ಸ್ ಕನ್ನಡ ವಾಹಿನಿಯಲ್ಲಿ ಕೆಜಿಎಫ್ ಸಿನಿಮಾ ಸದ್ಯದಲ್ಲೇ ಪ್ರಸಾರವಾಗುತ್ತದೆ ಎಂಬ ಸುದ್ದಿ ...

news

ತಮಿಳಿಗೆ ಹೊರಡುವ ಮುನ್ನ ಅಭಿಮಾನಿಗಳಿಗೆ ರಶ್ಮಿಕಾ ಮಂದಣ್ಣ ರಿಕ್ವೆಸ್ಟ್!

ಬೆಂಗಳೂರು: ಸ್ಯಾಂಡಲ್ ವುಡ್ ಬಳಿಕ, ತೆಲುಗಿನಲ್ಲೂ ಮೋಡಿ ಮಾಡಿದ ಕನ್ನಡದ ಬೆಡಗಿ ರಶ್ಮಿಕಾ ಮಂದಣ್ಣ ಈಗ ...

news

ದುಬಾರಿ ಕಾರು ಗಿಫ್ಟ್ ಕೊಟ್ಟಿದ್ದಕ್ಕೆ ಗಂಡನಿಗೆ ಪಬ್ಲಿಕ್ ಆಗಿ ಹೀಗೆ ಹೇಳಿದ್ರು ಪ್ರಿಯಾಂಕಾ ಚೋಪ್ರಾ

ಮುಂಬೈ: ಇತ್ತೀಚೆಗಷ್ಟೇ ಮದುವೆಯಾಗಿರುವ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ವೃತ್ತಿ ಜೀವನದಲ್ಲೂ ಯಶಸ್ಸು ...

news

ಕರೀನಾಗೆ ಬಿಕನಿ ಹಾಕಲು ಬಿಟ್ಟ ಸೈಫ್ ನೀನು ಎಂತಹ ಗಂಡಸೋ: ಟ್ರೋಲ್

ಬಾಲಿವುಡ್ ನಟಿ ಕರೀನಾ ಕಪೂರ್ ಬಿಕನಿ ಹಾಕಿದ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಪ್ರೇಕ್ಷಕರು ಟ್ರೋ ಮಾಡಲು ...