ಮುಬೈ: ಕೋಟ್ಯಂತರ ವೀಕ್ಷಕರ ಮನಗೆದ್ದಿದ್ದ ಕೌನ್ ಬನೇಗಾ ಕರೋಡ್ಪತಿ ಒಂಬತ್ತನೇ ಆವೃತ್ತಿ ನಡೆಸಲು ಸೀನಿ ವಾಹಿನಿ ಮುಂದಾಗಿದೆ. ಈ ನಿತ್ತಿನಲ್ಲಿ ನೋಂದಣಿಗೆ ಸೋನಿ ವಾಹಿನಿ ದಿನಾಂಕ ಪ್ರಕಟಿಸಿದೆ. ಜೂನ್ 17ರಿಂದ ನೋಂದಣಿ ಶುರುವಾಗಲಿದೆ. ಈ ಬಾರಿ ಮತ್ತೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇತ್ತೀಚೆಗೆ ತಮ್ಮ ಟ್ವಿಟರ್ ಖಾತೆಯಲ್ಲಿ ಖುದ್ದಾಗಿ ಅಮಿತಾಬ್ ಅವರೇ ಇದನ್ನು ಸ್ಪಷ್ಟಪಡಿಸಿದ್ದರು. ಅಲ್ಲದೆ, ಕರೋಡ್ಪತಿಯ ಚಿತ್ರೀಕರಣದ ದೃಶ್ಯಗಳನ್ನೂ ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.