Widgets Magazine

ಕನ್ನಡ ಬಾರದ ಸಲ್ಮಾನ್ ಖಾನ್ ಗೆ ಸಹಾಯ ಮಾಡಲಿರುವ ಕಿಚ್ಚ ಸುದೀಪ್

ಮುಂಬೈ| Krishnaveni K| Last Modified ಮಂಗಳವಾರ, 15 ಅಕ್ಟೋಬರ್ 2019 (10:07 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕನ್ನಡ ಮಾತನಾಡಲು ಹೇಳಿಕೊಡಲಿದ್ದಾರೆ!

 
ಸಿನಿಮಾದಲ್ಲಿ ಸಲ್ಮಾನ್ ಹೀರೋ ಆಗಿದ್ದರೆ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತಿರುವ  ವಿಚಾರವೇ. ಈ ಸಿನಿಮಾ ಡಿಸೆಂಬರ್ 20 ರಂದು ಹಿಂದಿ ಮಾತ್ರವಲ್ಲದೆ ಕನ್ನಡವೂ ಸೇರಿದಂತೆ ಬಹುಭಾಷೆಗಳಲ್ಲಿ ತೆರೆ ಕಾಣಲಿದೆ.
 
ಈ ಸಿನಿಮಾದಲ್ಲಿ ಕನ್ನಡಕ್ಕೂ ಡಬ್ ಆಗುತ್ತಿರುವುದರಿಂದ ಸ್ವತಃ ಸಲ್ಮಾನ್ ಕನ್ನಡದಲ್ಲೂ ಧ್ವನಿ ನೀಡಲಿದ್ದಾರಂತೆ. ಸಲ್ಮಾನ್ ಗೆ ಕನ್ನಡ ಗೊತ್ತಿಲ್ಲ. ಹೀಗಾಗಿ ಕನ್ನಡದಲ್ಲಿ ಡಬ್ ಮಾಡಲು ಕಿಚ್ಚ ಸುದೀಪ್ ಸಹಾಯ ಮಾಡಲಿದ್ದಾರಂತೆ.




ಇದರಲ್ಲಿ ಇನ್ನಷ್ಟು ಓದಿ :