ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್ ಕುಂದ್ರಾ ಹಲವು ದಿನಗಳ ಕಾಲ ಜೈಲಿನಲ್ಲಿ ಕಳೆದು ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದಾರೆ. ಈ ಮಧ್ಯೆ ನಟಿ ಶೆರ್ಲಿನ್ ಚೋಪ್ರಾ ನಾನಾ ರೀತಿಯ ಆರೋಪಗಳನ್ನು ಮಾಡುತ್ತಲೇ ಬಂದಿದ್ದರು. ತಮ್ಮನ್ನು ರಾಜ್ ಕುಂದ್ರಾ ಮೋಸದಿಂದ ಅಶ್ಲೀಲ ಸಿನಿಮಾ ದಂಧೆಗೆ ಎಳೆದು ತಂದರು ಎಂದು ಶೆರ್ಲಿನ್ ಚೋಪ್ರಾ ಹೇಳಿಕೊಂಡಿದ್ದಾರೆ. ಈಗ ಶಿಲ್ಪಾ ಶೆಟ್ಟಿ ಹಾಗೂ ರಾಜ್ ಕುಂದ್ರಾ 75 ಕೋಟಿ ರೂಪಾಯಿ ನೀಡುವಂತೆ ಶೆರ್ಲಿನ್ ಆಗ್ರಹಿಸಿದ್ದಾರೆ.