ಮುಂಬೈ: ಇತ್ತೀಚೆಗೆ ಬಾಲಿವುಡ್ ಸಿನಿಮಾಗಳು ಒಂದಲ್ಲಾ ಒಂದು ಕಾರಣಕ್ಕೆ ಬಹಿಷ್ಕಾರದ ಅಭಿಯಾನದ ಭೀತಿ ಎದುರಿಸುತ್ತಿವೆ. ಇದರಿಂದಾಗಿ ಚಿತ್ರದ ಗಳಿಕೆಗೂ ತೊಂದರೆಯಾಗುತ್ತಿದೆ.ಇದೀಗ ಅಮೀರ್ ಖಾನ್ ಬಹಳ ಸಮಯದ ನಂತರ ತೆರೆಗೆ ಬರುತ್ತಿರುವ ಲಾಲ್ ಸಿಂಗ್ ಛಡ್ಡಾ ಸಿನಿಮಾ ಇಂದು ಬಿಡುಗಡೆಯಾಗುತ್ತಿದ್ದು, ಈ ಸಿನಿಮಾ ವಿರುದ್ಧವೂ ನೆಟ್ಟಿಗರು ಕೆಲವು ದಿನಗಳಿಂದ ಬಹಿಷ್ಕಾರದ ಅಭಿಯಾನ ನಡೆಸುತ್ತಿದ್ದಾರೆ.ದೇಶದಾದ್ಯಂತ ಸುಮಾರು 3,500 ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಾಣುತ್ತಿದೆ. ಆದರೆ ಬಹಿಷ್ಕಾರದ ಅಭಿಯಾನ ಚಿತ್ರದ