ಮುಂಬೈ: ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ 10 ಇಯರ್ಸ್ ಚಾಲೆಂಜ್ ನಲ್ಲಿ ಇದೀಗ ಸೆಲೆಬ್ರಿಟಿಗಳು ಪೈಪೋಟಿಗೆ ಬಿದ್ದು ತಮ್ಮ 10 ವರ್ಷದ ಹಳೆಯ ಮತ್ತು ಈಗಿನ ಫೋಟೋಗಳನ್ನು ಪ್ರಕಟಿಸುತ್ತಿದ್ದಾರೆ.ಈ ನಡುವೆ ಈ ಚಾಲೆಂಜ್ ಸ್ವೀಕರಿಸಿದ ಬಾಲಿವುಡ್ ನಟಿ ಮಲೈಕಾ ಅರೋರಾಗೆ ಟ್ವಿಟರಿಗರು ಸರಿಯಾಗಿಯೇ ಬೆಂಡೆತ್ತಿದ್ದಾರೆ. ಇದಕ್ಕೆ ಕಾರಣ ಮಲೈಕಾ ಮಾಡಿದ ಎಡವಟ್ಟು.10 ಇಯರ್ಸ್ ಚಾಲೆಂಜ್ ಎಂದು ಮಲೈಕಾ 10 ವರ್ಷದ ಹಿಂದಿನ ಫೋಟೋ ಪ್ರಕಟಿಸುವ ಬದಲು 20 ವರ್ಷ ಹಳೆಯ ಫೋಟೋ