ಚೆನ್ನೈ: ಮಲೆಯಾಳಂನ ಮೆಗಾ ಸ್ಟಾರ್ ಮಮ್ಮುಟ್ಟಿ ಅವರು ಹೊಸ ಪಾತ್ರವೊಂದಕ್ಕೆ ಸಜ್ಜಾಗಿದ್ದಾರೆ. ತೆಲುಗಿನ ಯಾತ್ರ ಸಿನಿಮಾದಲ್ಲಿ ಮಮ್ಮುಟ್ಟಿ ಅವರು ಆಂಧ್ರಪ್ರದೇಶದ ದಿವಂಗತ ಮಾಜಿ ಮುಖ್ಯಮಂತ್ರಿ ವೈ.ಎಸ್ ರಾಜಶೇಖರ ರೆಡ್ಡಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. 2004ರಲ್ಲಿ ಮಾಜಿ ಸಿಎಂ ರಾಜಶೇಖರ ರೆಡ್ಡಿ 1475 ಕಿಲೋಮೀಟರ್ ಪಾದಯಾತ್ರೆ ಮಾಡಿ ಜನರನ್ನು ಭೇಟಿ ಮಾಡಿದ್ದರು. ಈ ಹಿನ್ನೆಲೆ ವೈಎಸ್ಆರ್ ರೆಡ್ಡಿ ಜಯಗಳಿಸಿದ್ದರು. ಈ ಎಳೆಯನ್ನೇ ಇಟ್ಟುಕೊಂಡು ಯಾತ್ರ ಸಿನಿಮಾ ತಯಾರಾಗುತ್ತಿದೆಯಂತೆ. ವೈಎಸ್ಆರ್ ರೆಡ್ಡಿ ಪಾತ್ರಕ್ಕೆ ಮಮ್ಮುಟ್ಟಿಯವರೇ