ಮುಂಬೈ: ಇತ್ತೀಚೆಗಷ್ಟೇ ವಿಶ್ವಸುಂದರಿಯಾಗಿ ಆಯ್ಕೆಯಾದ ಹರ್ಯಾಣದ ಚೆಲುವೆ ಮಾನುಷಿ ಚಿಲ್ಲರ್ ಗೆ ಇದೀಗ ಬಾಲಿವುಡ್ ನಲ್ಲಿ ಅದೃಷ್ಟದ ಬಾಗಿಲು ತೆರೆದಿದೆಯಾ? ಹಾಗೊಂದು ಸುದ್ದಿ ಓಡಾಡುತ್ತಿದೆ. ಮೂಲಗಳ ಪ್ರಕಾರ ಮಾನುಷಿ ಸಲ್ಮಾನ್ ಖಾನ್ ಗೆ ನಾಯಕಿಯಾಗುವ ಅವಕಾಶ ಪಡೆದಿದ್ದಾರಂತೆ. ಮಾನುಷಿ ಸೌಂದರ್ಯಕ್ಕೆ ಮನಸೋತಿರುವ ಸಲ್ಮಾನ್ ಆಕೆಯನ್ನು ತಮ್ಮ ಮುಂದಿನ ಚಿತ್ರಕ್ಕೆ ನಾಯಕಿಯಾಗಿ ಮಾಡಿ ಬಾಲಿವುಡ್ ಗೆ ಲಾಂಚ್ ಮಾಡಲು ಹೊರಟಿದ್ದಾರಂತೆ.ಈಗಾಗಲೇ ಹಲವಾರು ಬಾಲಿವುಡ್ ನಿರ್ಮಾಪಕರು ಮಾನುಷಿ ಮನೆ ಬಾಗಿಲು ತಟ್ಟುತ್ತಿದ್ದಾರೆ.