ಮುಂಬೈ: ವಿಜಯ್ ಅಭಿನಯದ ಮರ್ಸೆಲ್ ಚಿತ್ರದ ಸುತ್ತ ಹೊತ್ತಿಕೊಂಡಿದ್ದ ವಿವಾದದ ಕಿಡಿ ಇನ್ನೂ ಆರಿಲ್ಲ. ಜಿಎಸ್ ಟಿ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ ಎಂಬ ಬಿಜೆಪಿ ವಾದಕ್ಕೆ ಬಾಲಿವುಡ್ ನಿರ್ದೇಶಕ ಫರ್ಹಾನ್ ಅಖ್ತರ್ ತಿರುಗೇಟು ನೀಡಿದ್ದಾರೆ. ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹ ರಾವ್ ಮತ್ತು ಫರ್ಹಾನ್ ಅಖ್ತರ್ ನಡುವೆ ಈ ವಿವಾದದ ಕುರಿತಾಗಿ ಟ್ವಿಟರ್ ನಲ್ಲಿ ಮಾತಿನ ಚಕಮಕಿಯೇ ನಡೆದಿದೆ.ರಾವ್ ತಮ್ಮ ಟ್ವಿಟರ್ ನಲ್ಲಿ ಸಿನಿಮಾ ತಾರೆಯರಿಗೆ ಕಡಿಮೆ