ಅಮೀರ್ ಖಾನ್ ನಂತಹವರಿಂದಲೇ ಜನಸಂಖ್ಯೆ ಹೆಚ್ಚಾಗ್ತಿರೋದು! ಬಿಜೆಪಿ ಸಂಸದನ ಹೇಳಿಕೆ

ಮುಂಬೈ| Krishnaveni K| Last Modified ಮಂಗಳವಾರ, 13 ಜುಲೈ 2021 (10:36 IST)
ಮುಂಬೈ: ಜನಸಂಖ್ಯಾ ಸ್ಪೋಟದ ಬಗ್ಗೆ ಮಾತನಾಡುವಾಗ ಬಾಲಿವುಡ್ ನಟ ಅಮೀರ್ ಖಾನ್ ರ ಉದಾಹರಣೆ ಕೊಟ್ಟ ಬಿಜೆಪಿ ಸಂಸದ ಸುಧೀರ್ ಗುಪ್ತಾ ವಿವಾದಕ್ಕೊಳಗಾಗಿದ್ದಾರೆ.
 

ಇತ್ತೀಚೆಗಷ್ಟೇ ಪತ್ನಿ ಕಿರಣ್ ರಾವ್ ಗೆ ವಿಚ್ಛೇದನ ಕೊಟ್ಟ ಅಮೀರ್ ಬಗ್ಗೆ ಉಲ್ಲೇಖಿಸಿ ಇಂತಹವರಿಂದಲೇ ಜನ ಸಂಖ್ಯೆ ಹೆಚ್ಚಳವಾಗುತ್ತಿರುವುದು ಎಂದು ಸುಧೀರ್ ಗುಪ್ತಾ ಹೇಳಿಕೆ ನೀಡಿದ್ದಾರೆ.
 
‘ಅಮೀರ್ ಖಾನ್ ಗೆ ಇಬ್ಬರು ಪತ್ನಿಯರು. ಮೊದಲ ಪತ್ನಿಯಲ್ಲಿ ಇಬ್ಬರು ಮಕ್ಕಳು, ಎರಡನೇ ಪತ್ನಿಯಿಂದಲೂ ಒಂದು ಮಗುವಿದೆ. ಇದೀಗ ಮೂರನೇ ಹೆಂಡತಿಗೆ ಹುಡುಕಾಟ ನಡೆಸಿದ್ದಾರೆ. ದೇಶದ ಜನಸಂಖ್ಯೆ ಹೆಚ್ಚಳಕ್ಕೆ ಅಮೀರ್ ನಂತಹವರು ಕೊಡುಗೆ ನೀಡುತ್ತಿದ್ದಾರೆ’ ಎಂದು ಅಮೀರ್ ವಿರುದ್ಧ ಸುಧೀರ್ ಗುಪ್ತಾ ಆರೋಪ ಮಾಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :