ಮುಂಬೈ: ಉದ್ಯಮಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿಯ ಮದುವೆಯ ಸಂಭ್ರಮ ಈಗಾಗಲೇ ಕಳೆಗಟ್ಟಿದ್ದು, ಉದಯಪುರದಲ್ಲಿ ಮೂರು ದಿನಗಳ ಕಾಲ ಪ್ರಿ ವೆಡ್ಡಿಂಗ್ ಪಾರ್ಟಿ ನಡೆಯುತ್ತಿದೆ.ಡಿಸೆಂಬರ್ 7 ರಿಂದ 10 ರವರೆಗೆ ಪ್ರಿ ವೆಡ್ಡಿಂಗ್ ಪಾರ್ಟಿ ನಡೆಯುತ್ತಿದ್ದು, ಬಾಲಿವುಡ್ ತಾರೆಗಳ ದಂಡೇ ಹರಿದುಬರುತ್ತಿದೆ. ಡಿಸೆಂಬರ್ 12 ರಂದು ಇಶಾ ಪಿರಾಮಿಲ್ ಗ್ರೂಪ್ ಆಫ್ ಕಂಪನಿ ಒಡೆಯ ಅಜಯ್ ಪಿರಾಮಿಲ್ ಪುತ್ರ ಆನಂದ್ ಜತೆಗೆ ಹಸೆಮಣೆ ಏರಲಿದ್ದಾರೆ.