Photo Courtesy: Twitterಮುಂಬೈ: ಬಾಲಿವುಡ್ ನಟ, ರಂಗಕರ್ಮಿ ನವಾಜುದ್ದೀನ್ ಸಿದ್ದಿಕಿ ಸ್ಯಾಂಡಲ್ ವುಡ್ ನಿರ್ದೇಶಕ ರಿಷಬ್ ಶೆಟ್ಟಿ ಬಗ್ಗೆ ತಮ್ಮ ಮನದಾಳದ ಮಾತನಾಡಿದ್ದಾರೆ.ಇತ್ತೀಚೆಗೆ ರಿಷಬ್ ಶೆಟ್ಟಿ ಜೊತೆಗೆ ಸಂವಾದ ನಡೆಸಿರುವ ನವಾಜುದ್ದೀನ್ ಸಿದ್ದಿಕಿ ತಮಗೆ ರಿಷಬ್ ರನ್ನು ಕಂಡರೆ ಅಸೂಯೆಯಾಗುತ್ತದೆ ಎಂದು ಹೇಳಿದ್ದಾರೆ.‘ರಿಷಬ್ ಕಾಂತಾರ ಸಿನಿಮಾ ಯಶಸ್ಸಿಗೆ ಹೆಚ್ಚು ಪ್ರಮೋಷನ್ ಮಾಡಲಿಲ್ಲ. ಜನರೇ ಅದನ್ನು ಯಶಸ್ವಿಗೊಳಿಸಿದರು. ರಿಷಬ್ ಪರಿಶ್ರಮ ನೋಡಿ ಇಡೀ ದೇಶವೇ ಬೆರಗಾಯಿತು. ಅವರನ್ನು ನೋಡಿದರೆ ನನಗೆ ಅಸೂಯೆಯಾಗುತ್ತದೆ.