ಸೋನು ಸೂದ್ ಕಚೇರಿಯಲ್ಲಿ ಐಟಿ ತಪಾಸಣೆ: ನೆಟ್ಟಿಗರ ಆಕ್ರೋಶ

ಮುಂಬೈ| Krishnaveni K| Last Modified ಬುಧವಾರ, 15 ಸೆಪ್ಟಂಬರ್ 2021 (17:32 IST)
ಮುಂಬೈ: ಕೊರೋನಾ, ಲಾಕ್ ಡೌನ್ ಸಮಯದಲ್ಲಿ ಸಾಮಾಜಿಕ ಕೆಲಸಗಳ ಮೂಲಕ ಜನರ ಕಣ್ಣಲ್ಲಿ ಹೀರೋ ಆಗಿದ್ದ ನಟ ಸೋನು ಸೂದ್ ಕಚೇರಿ ಮೇಲೆ ಐಟಿ ಕಣ್ಣು ಬಿದ್ದಿದೆ. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
 

ಸೋನು ಸೂದ್ ಮುಂಬೈ ಕಚೇರಿಯಲ್ಲಿ ಐಟಿ ತಪಾಸಣೆ ನಡೆಸಿದೆ. ಜೊತೆಗೆ ಅವರ ಮನೆ ಮೇಲೂ ಐಟಿ ಕಣ್ಣು ನೆಟ್ಟಿದೆ. ಇದರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಸರ್ಕಾರ ಮಾಡಬೇಕಾದ ಕೆಲಸವನ್ನು ತಾವೇ ಮಾಡಿದ್ದಕ್ಕೆ ನಟನಿಗೆ ಈ ಶಿಕ್ಷೆಯಾ ಎಂದು ಪ್ರಶ್ನೆ ಮಾಡಿದ್ದಾರೆ.
 
ಸ್ವಾರ್ಥ ರಹಿತವಾಗಿ ಕೊರೋನಾ ಸಮಯದಲ್ಲಿ ಜನರಿಗೆ ನಾನಾ ರೀತಿಯ ಸಹಾಯ ಮಾಡಿದ್ದ ಸೋನು ಸೂದ್ ಎಲ್ಲರ ಪಾಲಿನ ಹೀರೋ ಆಗಿದ್ದರು. ಇದರ ಬಗ್ಗೆ ಅವರು ಒಂದು ಪುಸ್ತಕವನ್ನೇ ಬರೆದಿದ್ದರು. ಇದೀಗ ಅವರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆಗೆ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದರಲ್ಲಿ ಇನ್ನಷ್ಟು ಓದಿ :