ಮುಂಬೈ : ನಟಿ ನಿಧಿ ಅಗರ್ವಾಲ್ ಹಾಗೂ ಕ್ರಿಕೆಟಿಗ ರಾಹುಲ್ ಅವರು ಜೊತೆಯಾಗಿ ರೆಸ್ಟಾರೆಂಟ್ ನಲ್ಲಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಇವರಿಬ್ಬರ ಕುರಿತಾಗಿ ರೂಮರ್ಸ್ ಒಂದು ಕೇಳಿಬಂದಿತ್ತು. ಆದರೆ ಇದೀಗ ನಟಿ ನಿಧಿ ಅಗರ್ವಾಲ್ ಅವರು ಈ ಬಗ್ಗೆ ಸ್ಪಷ್ಟನೆ ನೀಡುವುದರ ಮೂಲಕ ಈ ರೂಮರ್ಸ್ ಗೆ ತೆರೆ ಎಳೆದಿದ್ದಾರೆ. ಇತ್ತೀಚೆಗೆ ನಟಿ ನಿಧಿ ಅಗರ್ವಾಲ್ ಅವರು ಕ್ರಿಕೆಟಿಗ ರಾಹುಲ್ ಅವರ ಜೊತೆ ಸುತ್ತಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.