ಮುಂಬೈ: ಸಾಕಷ್ಟು ಪರ–ವಿರೋಧ ಚರ್ಚೆಯನ್ನು ಹುಟ್ಟುಹಾಕಿದ, ಸಂಜಯ್ ಲೀಲಾ ಬನ್ಸಾಲಿ ಅವರ ಪದ್ಮಾವತಿ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್ಸಿ– ಸೆನ್ಸಾರ್ ಮಂಡಳಿ) ಯುಎ ಪ್ರಮಾಣಪತ್ರ ನೀಡಲು ನಿರ್ಧರಿಸಿದೆ. ಅಂದಹಾಗೇ, ಚಲನಚಿತ್ರದ ಯಾವುದೇ ಭಾಗಕ್ಕೆ ಕತ್ತರಿ ಹಾಕಲು ಅದು ಸೂಚಿಸಿಲ್ಲವಂತೆ. ಆದರೆ, ಚಿತ್ರದ ಹೆಸರನ್ನು ಮಾತ್ರ ಪದ್ಮಾವತ್ ಎಂದು ಬದಲಾಯಿಸುವಂತೆ ಸೆನ್ಸಾರ್ ಮಂಡಳಿಯು ನಿರ್ದೇಶಕರಿಗೆ ಹೇಳಿದೆ. ಚಿತ್ರದಲ್ಲಿ 26 ದೃಶ್ಯಾವಳಿಗಳಿಗೆ ಕತ್ತರಿ ಹಾಕಲು ಮಂಡಳಿ ಸೂಚಿಸಿದೆ ಎಂಬ ಸುದ್ದಿ