ಸಾಮಾಜಿಕ ಮಾಧ್ಯಮಗಳಲ್ಲಿ ಅಷ್ಟಾಗಿ ಕ್ರಿಯಾಶೀಲವಾಗಿ ಕಾಣಿಸದ ಟಾಲಿವುಡ್ ಯಂಗ್ ಟೈಗರ್ ಜೂ.ಎನ್ಟಿಆರ್ ಇತ್ತೀಚೆಗೆ ಆಸಕ್ತಿಕರವಾದ ಟ್ವೀಟ್ ಮಾಡಿದ್ದಾರೆ. ಬೇರೊಬ್ಬರ ಸಿನಿಮಾಗಳ ಬಗ್ಗೆ ಟ್ವೀಟ್ ಮಾಡದ ಎನ್ಟಿಆರ್, ತನ್ನ ಚಿಕ್ಕಪ್ಪ ಬಾಲಕೃಷ್ಣ ನಟಿಸಿರುವ ಗೌತಮಿಪುತ್ರ ಶಾತಕರ್ಣಿಗೆ ಶುಭಹಾರೈಸಿದ್ದರು. ಈಗ ಬಾಲಿವುಡ್ ಹೀರೋ ಸಿನಿಮಾಗೆ ಶುಭಹಾರೈಸಿದ್ದಾರೆ. ದಕ್ಷಿಣದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ವಿದ್ಯುತ್ ಜಮಾಲ್ ಬಾಲಿವುಡ್ನಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಕಮಾಂಡೋ. ಈ ಚಿತ್ರದ ಎರಡನೇ ಭಾಗವಾಗಿ ಕಮಾಂಡೋ 2 ಬರುತ್ತಿದೆ.