ನ್ಯೂಯಾರ್ಕ್: ಬಾಲಿವುಡ್, ರಂಗಭೂಮಿ ಸೇರಿದಂತೆ ಹಲವು ಸಿನಿಮಾ, ನಾಟಕಗಳಲ್ಲಿ ಅಭಿನಯಿಸಿದ್ದ ಖ್ಯಾತ ಅಮೆರಿಕಾ ಮೂಲದ ನಟ ಟಾಮ್ ಆಲ್ಟರ್ ನಿಧನರಾಗಿದ್ದಾರೆ.ಬಹುದಿನಗಳಿಂದ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಅವರು ಮುಂಬೈನಲ್ಲಿ ನಿನ್ನೆ ನಿಧನರಾಗಿದ್ದಾರೆ. 1977 ರಲ್ಲಿ ಅನಂತ್ ನಾಗ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದ ಕನ್ನೇಶ್ವರ ರಾಮ ಎಂಬ ಕನ್ನಡ ಸಿನಿಮಾದಲ್ಲೂ ಅವರು ಅಭಿನಯಿಸಿದ್ದರು.ಇದಲ್ಲದೆ ಸರ್ದಾರ್, ಪರಿಂದಾ, ದೇಸ್ ಪರ್ದೇಸ್ ಮುಂತಾದ ಹಲವು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ. 1950 ರಲ್ಲಿ ಅಮೆರಿಕಾದಲ್ಲಿ ಜನಿಸಿದ ಅವರು