ಪಾಕ್ ಗಾಯಕ ಅತಿಫ್ ಅಸ್ಲಾಮ್ ವಿರುದ್ಧ ಪಾಕ್ ಜನರು ಕೋಪಗೊಂಡಿದ್ಯಾಕೆ?

ಕರಾಚಿ| pavithra| Last Modified ಸೋಮವಾರ, 13 ಆಗಸ್ಟ್ 2018 (07:35 IST)
ಕರಾಚಿ : ನ್ಯೂಯಾರ್ಕ್ ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಹಾಡು ಹಾಡಿದ ಪಾಕ್ ಅತಿಫ್ ಅಸ್ಲಾಮ್ ವಿರುದ್ಧ
ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಅಂದು ಪಾಕ್ ಗಾಯಕ ಅತಿಫ್ ಅಸ್ಲಾಮ್ ಭಾರತೀಯ ಹಾಡನ್ನು ಹಾಡಿದ್ದರು. ಇದರಿಂದ ಪಾಕ್ ಜನರು ಕೋಪಗೊಂಡು 'ನಿಮ್ಮಲ್ಲಿರುವ ದೇಶ ಭಕ್ತಿ ಎಲ್ಲಿ ಹೋಯಿತು?, ನೀನೊಬ್ಬ ಪಾಕ್ ನಾಗರೀಕ ಪ್ರಜೆನಾ.? ' ಎಂದು ಪ್ರಶ್ನಿಸುತ್ತಿದ್ದಾರೆ. ಜೊತೆಗೆ ಪಾಕಿಸ್ತಾನ ಸುದ್ದಿ ವಾಹಿನಿಗಳಲ್ಲಂತೂ ಗಾಯಕ ಅತಿಫ್ ಅಸ್ಲಾಮ್ ವಿರುದ್ಧ

ಮಿತಿ ಮೀರಿದ ಟೀಕೆಗಳು ವ್ಯಕ್ತವಾಗುತ್ತಿದೆ.


ಆದರೆ ಅಲ್ಲಿನ ಗಾಯಕ ಶಖ್ಫತ್ ಅಮಾನತ್ ಅಸ್ಲಾಮ್ ಅವರ ಬೆಂಬಲಕ್ಕೆ ನಿಂತಿದ್ದು, ಸಂಗೀತಕ್ಕೆ, ಹರಿಯುವ ನದಿಗೆ,ಹಾಡುವ ಕೋಗಿಲೆಗೆ, ನಗುವ ಮಗುವಿಗೆ, ಪ್ರೀತಿಸುವ ತಾಯಿಗೆ, ಹಸಿವನ್ನು ತೀರಿಸುವ ಅನ್ನಕ್ಕೆ ಇದು ಭಾರತ, ಇದು ಪಾಕಿಸ್ತಾನ ಎನ್ನುವ ಮಿತಿಗಳಿಗಳಿರುವುದಿಲ್ಲ, ಪೃಕೃತಿ ಹೇಗೆ ಸೂಚನೆ ನೀಡುತ್ತದೋ ಹಾಗೆ ಮುಂದುವರೆಯುತ್ತದೆ ಎಂದು ಹೇಳಿಕೊಂಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :