ಅರೆಸ್ಟ್ ಆದ ರಾಜ್ ಕುಂದ್ರಾ ಪ್ಲ್ಯಾನ್ ಬಗ್ಗೆ ಭಯಾನಕ ಸತ್ಯ ಬಿಚ್ಚಿಟ್ಟ ಪೊಲೀಸರು!

ಮುಂಬೈ| Krishnaveni K| Last Modified ಗುರುವಾರ, 22 ಜುಲೈ 2021 (09:50 IST)
ಮುಂಬೈ: ನೀಲಿ ಚಿತ್ರಗಳನ್ನು ನಿರ್ಮಿಸುವ ಆರೋಪದ ಕುರಿತಂತೆ ಬಂಧಿತರಾಗಿರುವ ಉದ್ಯಮಿ ರಾಜ್ ಕುಂದ್ರಾ ಬಗ್ಗೆ ಪೊಲೀಸರು ಭಯಾನಕ ಸತ್ಯಗಳನ್ನು ಬಿಚ್ಚಿಟ್ಟಿದ್ದಾರೆ.
 
Photo Courtesy: Google

ಖಚಿತ ಸಾಕ್ಷ್ಯದ ಮೇರೆಗೆ ರಾಜ್ ಕುಂದ್ರಾರನ್ನು ಮೊನ್ನೆ ಬಂಧಿಸಲಾಗಿತ್ತು. ರಾಜ್ ಕುಂದ್ರಾ ಜೊತೆಗೆ ಇದೇ ಆರೋಪದಲ್ಲಿ ಭಾಗಿಯಾಗಿರುವ 11 ಮಂದಿಯನ್ನು ಪೊಲೀಸರು ಇದುವರೆಗೆ ಬಂಧಿಸಿದ್ದಾರೆ.
 
ಪೊಲೀಸರ ಪ್ರಕಾರ ರಾಜ್ ಕುಂದ್ರಾ ಪೋರ್ನ್ ವಿಡಿಯೋಗಳ ಮೂಲಕ ಭಾರೀ ಮೊತ್ತದ ಹಣ ಗಳಿಸಲು ಸರಿಯಾದ ಪ್ಲ್ಯಾನ್ ಮಾಡಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಲೈವ್ ಆಗಿ ಪೋರ್ನ್ ವಿಡಿಯೋಗಳನ್ನು ಹರಿಯಬಿಟ್ಟು ಲಾಭ ಪಡೆಯುವುದೂ ಅವರ ಉದ್ದೇಶವಾಗಿತ್ತು ಎನ್ನಲಾಗಿದೆ. ಪೋರ್ನ್ ವಿಡಿಯೋಗಳಿಂದ ದಿನವೊಂದಕ್ಕೆ 7 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದರು ಎನ್ನಲಾಗಿದೆ. ಪ್ರತಿನಿತ್ಯ ರಾಜ್ ಕುಂದ್ರಾ ಕರ್ಮಕಾಂಡಗಳ ಬಗ್ಗೆ ಹಲವು ವಿಚಾರಗಳು ಬೆಳಕಿಗೆ ಬರುತ್ತಿವೆ.
ಇದರಲ್ಲಿ ಇನ್ನಷ್ಟು ಓದಿ :