Widgets Magazine

ಲಾಕ್ ಡೌನ್ ಉಲ್ಲಂಘಿಸಿದ್ದಕ್ಕೆ ಬಂಧಿತರಾದರೇ ನಟಿ ಪೂನಂ ಪಾಂಡೆ? ನಟಿಯ ಸ್ಪಷ್ಟನೆ ಏನು ಗೊತ್ತಾ?

ಮುಂಬೈ| Krishnaveni K| Last Modified ಮಂಗಳವಾರ, 12 ಮೇ 2020 (09:49 IST)
ಮುಂಬೈ: ದೇಶವಿಡೀ ಲಾಕ್ ಡೌನ್ ಇರುವಾಗ ಅನಗತ್ಯವಾಗಿ ಯಾರಿಗೂ ಹೊರಗೆ ಓಡಾಡಲು ಅವಕಾಶವಿಲ್ಲ. ಹೀಗಿದ್ದರೂ ಬಾಲಿವುಡ್ ನಟಿ ಪೂನಂ ಪಾಂಡೆ ಗೆಳೆಯನ ಜತೆ ತಮ್ಮ ಕಾರಿನಲ್ಲಿ ಸುತ್ತಾಡಿದ್ದಕ್ಕೆ ಪೊಲೀಸರ ಅವರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
 

ಈ ಬಗ್ಗೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಪೂನಂ ಪಾಂಡೆ ಸ್ಪಷ್ಟನೆ ನೀಡಿದ್ದಾರೆ. ಗೆಳೆಯ ಸ್ಯಾಮ್ ಅಹಮ್ಮದ್ ಜತೆ ಐಷಾರಾಮಿ ಕಾರಿನಲ್ಲಿ ಸುತ್ತಾಡಿ ಮಜಾ ಮಾಡಿದ್ದರು ಎಂಬ ಕಾರಣಕ್ಕೆ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.
 
ಈ ಬಗ್ಗೆ ಇನ್ ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿರುವ ನಟಿ ‘ನನ್ನನ್ನು ಪೊಲೀಶರು ಬಂಧಿಸಿದ್ದಾರೆಂಬ ಸುದ್ದಿ ಬರುವಾಗ ನಿನ್ನೆ ರಾತ್ರಿಯಿಡೀ ಮನೆಯಲ್ಲಿ ಮೂರು ಸಿನಿಮಾಗಳನ್ನು ಒಂದಾದ ಮೇಲೊಂದರಂತೆ ನೋಡಿಕೊಂಡು ಆರಾಮವಾಗಿದ್ದೆ’ ಎಂದಿದ್ದಾರೆ. ಆ ಮೂಲಕ ತಮ್ಮನ್ನು ಅರೆಸ್ಟ್ ಮಾಡಿರುವ ಸುದ್ದಿಯೆಲ್ಲಾ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :