ಹೈದರಾಬಾದ್: ಬಾಹುಬಲಿ ನಂತರ ದೇಶಾದ್ಯಂತ ಜನಪ್ರಿಯರಾಗಿರುವ ಪ್ರಭಾಸ್ ಈಗ ಅಭಿಮಾನಿಗಳ ಒತ್ತಡಕ್ಕೆ ಮಣಿದು ಇನ್ ಸ್ಟಾಗ್ರಾಂಗೆ ಅಡಿಯಿಡಲಿದ್ದಾರೆ ಎಂಬ ಸುದ್ದಿ ಬಂದಿದೆ.ಪ್ರಭಾಸ್ ಹೆಸರಿನಲ್ಲಿ ಅದೆಷ್ಟೋ ಖಾತೆಗಳು ಇನ್ ಸ್ಟಾಗ್ರಾಂನಲ್ಲಿವೆ. ಆದರೆ ಅಧಿಕೃತವಾಗಿ ಪ್ರಭಾಸ್ ಇನ್ ಸ್ಟಾಗ್ರಾಂನಲ್ಲಿರಲಿಲ್ಲ. ಆದರೆ ಅಭಿಮಾನಿಗಳು ಒತ್ತಾಯಿಸುತ್ತಿರುವುದರಿಂದ ಇನ್ ಸ್ಟಾಗ್ರಾಂ ಖಾತೆ ತೆರೆಯಲು ಪ್ರಭಾಸ್ ಚಿಂತನೆ ನಡೆಸಿದ್ದಾರಂತೆ.ಪ್ರಭಾಸ್ ವೃತ್ತಿ ಮತ್ತು ವೈಯಕ್ತಿಕ ಜೀವನದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಲು ಕುತೂಹಲ ಹೊಂದಿರುವ ಅಭಿಮಾನಿಗಳು ಇನ್ ಸ್ಟಾಗ್ರಾಂ ಖಾತೆ ತೆರೆಯಲು