ವೃತ್ತಿ ಜೀವನಕ್ಕಿಂತ ವೈಯುಕ್ತಿಕ ವಿಚಾರಗಳಿಗೆ ಹೆಸರಾಗುತ್ತಿರುವ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ಹೊಸ ಸುದ್ದಿಯನ್ನು ಮಾಡಿದ್ದಾರೆ. ಬಾಲಿವುಡ್ನಲ್ಲಿ ಮಿಂಚಿದ ಪ್ರಿಯಾಂಕಾ ಕಳೆದ ಕೆಲವು ತಿಂಗಳಿಂದ ಹಾಲಿವುಡ್ ಗಾಯಕ ನಿಕ್ ಜೋನಸ್ ಜೊತೆ ಡೇಟ್ ಮಾಡುತ್ತಿರುವ ಸುದ್ದಿ ಹರಡುತ್ತಿತ್ತು. ಆದರೆ ಇದೀಗ ಅವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂದು ಅಮೆರಿಕಾದ ಮಾಧ್ಯಮಗಳು ವರದಿ ಮಾಡಿವೆ. ಕಳೆದ ವಾರ ಲಂಡನ್ನಲ್ಲಿ ನಿಶ್ಚಿತಾರ್ಥದ ಉಂಗುರವನ್ನು ಖರೀದಿಸಲು ನಿಕ್ ಇಡೀ ಟಿಫಾನಿ ಅಂಗಡಿಯನ್ನು ಮುಚ್ಚಿಸಿದ್ದರು ಎಂಬ