ಮುಂಬೈ : ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೆರಿಕದ ಖ್ಯಾತ ಗಾಯಕ ನಿಕ್ ಜೋನ್ಸ್ ಮದುವೆ ಇದೇ ವರ್ಷ ಸೆಪ್ಟೆಂಬರ್ 16ರಂದು ನಿಗದಿಯಾಗಿದ್ದು, ಈ ಡೇಟ್ಸ್ ಬಹುತೇಕ ಖಚಿತವಾಗಿದೆ ಎಂಬುದಾಗಿ ತಿಳಿದುಬಂದಿದೆ. ಪ್ರಿಯಾಂಕ ಅವರ 36ನೇ ಜನ್ಮದಿನವಾದ ಜುಲೈ 18ರಂದು ಪ್ರಿಯಾಂಕ- ನಿಕ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಸುದ್ದಿ ಕೇಳಿಬಂದಿತ್ತು. ಇದೀಗ ಈ ಸುದ್ದಿಯ ಬೆನ್ನಲ್ಲೇ ಪ್ರಿಯಾಂಕ ಅವರ ಪ್ರಿಯಕರ ನಿಕ್ ಜನ್ಮದಿನವಾದ ಸೆಪ್ಟೆಂಬರ್ 16ರಂದು ಇವರಿಬ್ಬರು ಮದುವೆಯಾಗಲಿದ್ದಾರೆ