ಬೆಂಗಳೂರು : ಪ್ರಾದೇಶಿಕ ಸೆನ್ಸಾರ್ ಮಂಡಳಿಯ ವಿರುದ್ಧ ಕನ್ನಡ ಚಿತ್ರರಂಗದ ಹಲವಾರು ನಿರ್ಮಾಪಕರು, ನಿರ್ದೇಶಕರು ಇಂದು 10ಗಂಟೆಗೆ ಫಿಲಂ ಚೇಂಬರ್ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಇತ್ತೀಚೆಗೆ ಸೆನ್ಸಾರ್ ಮಂಡಳಿ ನಿಗದಿತ ವೇಳೆಗೆ ಸಿನಿಮಾಗಳನ್ನ ಸೆನ್ಸಾರ್ ಮಾಡುತ್ತಿಲ್ಲ. ಜೊತೆಗೆ ಎಲ್ಲಾ ಸಿನಿಮಾಗಳಿಗೂ ಎ ಸರ್ಟಿಫಿಕೇಟ್ ಕೊಡ್ತಿದ್ದಾರೆ. ಹಾಗೇ ನಿರ್ಮಾಪಕ, ನಿರ್ದೇಶಕರನ್ನ ಅಗೌರವದಿಂದ ಕಾಣ್ತಿದೆ ಎಂದು ಸೆನ್ಸಾರ್ ಮಂಡಳಿಯ ವಿರುದ್ಧ ಕನ್ನಡ ಚಿತ್ರರಂಗದ ಹಲವಾರು ನಿರ್ಮಾಪಕರು, ನಿರ್ದೇಶಕರು ಗರಂ ಆಗಿದ್ದಾರೆ.